ಮಾಯಾ ಕನ್ನಡಿ-ಪ್ರಜ್ವಲ್ ಶಾಸ್ತ್ರಿ

Resource Info

ಮೂಲ ಮಾಹಿತಿ

ಆಕಾಶವು ಆದಷ್ಟು ಮೋಡರಹಿತವಾಗಿದ್ದರೆ ಶಾಲಾ ಸಮಯದಲ್ಲಿ ನಮಗೆ ಸೂರ್ಯ ಚೆನ್ನಾಗಿ ಕಾಣಿಸುವನು. ಆಗ ನಾವೇ ಸುಲಭವಾಗಿ ತಯಾರಿಸಬಹುದಾದಂತಹ ಉಪಕರಣಗಳನ್ನು ಬಳಸಿ ಸರಳ ವೀಕ್ಷಣೆಗಳನ್ನು ಮಾಡಿ ಸೂರ್ಯನಿಗೆ ಸಂಬಂಧಿಸಿದ ಮಾಪನಗಳನ್ನು ನಾವು ಮಾಡಬಹುದು.

ಕಾಲಾವಧಿ: 
00 hours 20 mins
ಪೀಠಿಕೆ: 

ಆಕಾಶವು ಆದಷ್ಟು ಮೋಡರಹಿತವಾಗಿದ್ದರೆ ಶಾಲಾ ಸಮಯದಲ್ಲಿ ನಮಗೆ ಸೂರ್ಯ ಚೆನ್ನಾಗಿ ಕಾಣಿಸುವನು. ಆಗ ನಾವೇ ಸುಲಭವಾಗಿ ತಯಾರಿಸಬಹುದಾದಂತಹ ಉಪಕರಣಗಳನ್ನು ಬಳಸಿ ಸರಳ ವೀಕ್ಷಣೆಗಳನ್ನು ಮಾಡಿ ಸೂರ್ಯನಿಗೆ ಸಂಬಂಧಿಸಿದ ಮಾಪನಗಳನ್ನು ನಾವು ಮಾಡಬಹುದು. ಇದರಿಂದ ಖಗೋಳವಿಜ್ಞಾನ ಪ್ರಪಂಚ, ಸೂರ್ಯನಲ್ಲಾಗುವ ಕ್ರಿಯೆಗಳು, ಪಿನ್-ಹೋಲ್ ಕ್ಯಾಮರ ಮತ್ತು ಬಿಂಬ - ಇವುಗಳನ್ನು ಕುರಿತ ಒಳನೋಟಳು ದೊರೆಯುತ್ತವೆ.

ಚಟುವಟಿಕೆ ಹಂತಗಳು: 
ಚಟುವಟಿಕೆ : ಮಾಯಾ ಕನ್ನಡಿ
        
ಬೇಕಾದ ಸಾಮಗ್ರಿಗಳು: ೩೦ ಸೆಂ.ಮೀ. ೩೦ ಸೆಂ.ಮೀ. ಅಳತೆಯ ಒಂದು ಸಮತಲ ಕನ್ನಡಿ; ೧೫ ಸೆಂ.ಮೀ.  ೧೫ ಸೆಂ.ಮೀ. ಅಳತೆಯ ದಪ್ಪ ಕಪ್ಪು ಕಾಗದ ( ಕಾಗದದ ಅಳತೆಯು ನಿಮ್ಮ ಬಳಿ ಇರುವ ಕನ್ನಡಿಯ ಅಳತೆಯನ್ನು ಅವಲಂಬಿಸಿದೆ - ಸೂಚನೆಗಳನ್ನು ನೋಡಿ); ದುಂಡನೆಯ ನಾಣ್ಯ, ಕತ್ತರಿ, ಅಂಟು, ಒಂದು ಸಣ್ಣ ರೂಲರ್, ಅಳತೆ ಟೇಪ್; ವೀಕ್ಷಣೆಯನ್ನು ದಾಖಲಿಸಲು ಒಂದು ಸಣ್ಣ ನೋಟ್ ಪುಸ್ತಕ.
 
        ಅಗತ್ಯ ಪರಿಸ್ಥಿತಿಗಳು: ಸೂರ್ಯನು ಕಾಣುವಷ್ಟು ಶುಭ್ರ ಆಕಾಶ (ಬಿಟ್ಟು ಬಿಟ್ಟು ಕಂಡರೂ ತೊಂದರೆ ಇಲ್ಲ) ಮತ್ತು ಹೆಚ್ಚು ಅಡ್ಡಿಯಿಲ್ಲದೆ ಆಕಾಶ ಕಾಣುವ ತೆರೆದ ಪ್ರದೇಶ.
 
 
 
       ಚಿತ್ರ .: ಮಧ್ಯ ಭಾಗದಲ್ಲಿ ಚೌಕಾಕಾರದ ಕನ್ನಡಿಯನ್ನು ಅಂಟಿಸಿರುವ ’ಪ್ಲಸ್’ ಆಕಾರದಲ್ಲಿ ಕತ್ತರಿಸಿದ ಕಪ್ಪು ಕಾಗದ;  ನಾಲ್ಕು ಹೊರ ವಿಭಾಗಗಳಲ್ಲಿ ಚೌಕ, ವೃತ್ತ, ನಕ್ಷತ್ರ ಮತ್ತು ತ್ರಿಭುಜಾಕಾರಗಳನ್ನು ಕತ್ತರಿಸಿದೆ. ಕೃಪೆ: ನವನಿರ್ಮಿತಿ ೨೦೧೩,
 
ಮಾಯಾ ಕನ್ನಡಿಯ ನಿರ್ಮಾಣ:
ಹಂತ ೧:- ಕಪ್ಪು ಕಾಗದವು ಪ್ಲಸ್ ಆಕಾರ ಬರುವ ರೀತಿಯಲ್ಲಿ ಕಪ್ಪು ಕಾಗದದ ಪ್ರತಿಯೊಂದು ಮೂಲೆಯಲಿಯೂ ಕಾಗದದ ಅಂಚುಗಳಿಗೆ ಸಮಾಂತರವಾಗಿ ೫ ಸೆಂ.ಮೀ.  ೫ ಸೆಂ.ಮೀ. ಅಳತೆಯ ಚೌಕಾಕಾರವನ್ನು ಕತ್ತರಿಸಿ ತೆಗೆಯಿರಿ. (ಚಿತ್ರ ೨ ನೋಡಿ).
 
ಹಂತ ೨:  ಈ ’ಪ್ಲಸ್’ ಆಕಾರದ  ಹೊರ ಭಾಗಗಳಲ್ಲಿ ಚೌಕ, ವೃತ್ತ (ಇದನ್ನು ಬರೆಯಲು ನಾಣ್ಯ ಬಳಸಿ),  ನಕ್ಷತ್ರಾಕಾರ ಮತ್ತು ಸಮಬಾಹು ತ್ರಿಭುಜಗಳ ಆಕಾರಗಳನ್ನು ಕತ್ತರಿಸಿ ತೆಗೆಯಿರಿ. ಈ ಆಕಾರಗಳು ಕನ್ನಡಿಯ ಅಳತೆಗಿಂತ  ಚಿಕ್ಕದಾಗಿರಬೇಕು.
 
       ಹಂತ ೩: ’ಪ್ಲಸ್’ನ ಮಧ್ಯದ ಚೌಕಾಕಾರದ ಮೇಲೆ ಅಂಟನ್ನು ಬಳಸಿ ಕನ್ನಡಿಯನ್ನು ಅಂಟಿಸಿ.
 
ಹಂತ ೪:- ಕತ್ತರಿಸಿದ ಪ್ರತಿಯೊಂದು ಚಚ್ಚೌಕ ಭಾಗವೂ ಕನ್ನಡಿಯ ಮೇಲೆ ಬರುವಂತೆ ಮಡಿಸಿ. ಇದರಿಂದ ನಿಮಗೆ ಕನ್ನಡಿಯನ್ನು ಮರೆ ಮಾಡುವ ನಾಲ್ಕು ಮಡಿಕೆಗಳು ದೊರೆತವು.
 
     ಈಗ ಮಾಯಾ ಕನ್ನಡಿ ಸಿದ್ಧವಾಯಿತು!  
 
ಬಳಸುವ ರೀತಿ:  ಹೊರಗೆ ಸೂರ್ಯನು ಕಾಣುವ ಜಾಗಕ್ಕೆ ಈ ಮಾಯಾ ಕನ್ನಡಿಯನ್ನು ಒಯ್ಯಿರಿ. ’ಸೂರ್ಯಬಿಂಬ ಕನ್ನಡಿಯಲ್ಲಿ ಬರುವಂತೆ ’ ಕನ್ನಡಿಯನ್ನು ಸೂರ್ಯನತ್ತ ತಿರುಗಿಸಿ, ಸೂರ್ಯನ ಪ್ರಕಾಶಮಾನವಾದ ಬಿಂಬ ಸುಮಾರು ೧ ಮೀಟರ್ ದೂರದ ಮೇಲ್ಮೈ ಮೇಲೆ ಬೀಳುವಂತೆ ಅತ್ತಿತ್ತ ತಿರುಗಿಸಿ ಪ್ರಯೋಗ ಮಾಡಿ. ಬಿಂಬವು ಬೀಳುವ ಮೇಲ್ಮೈ ಗೋಡೆ ಅಥವಾ ಮಿತ್ರನು ಹಿಡಿದ ಕಾಗದದ ಹಾಳೆ ಅಥವಾ ವ್ಯಕ್ತಿಯೊಬ್ಬನ ಬಟ್ಟೆಯ ಮೇಲ್ಮೈ - ಯಾವುದಾದರೂ ಆಗಬಹುದು.
ನಂತರ, ಮಾಯಾ ಕನ್ನಡಿಯ ಪ್ರತಿಯೊಂದು ಮಡಿಕೆಯನ್ನೂ ಕನ್ನಡಿಯನ್ನು ಮುಚ್ಚುವ ರೀತಿಯಲ್ಲಿ ಮಡಿಸಿರಿ. ಈಗ ಪ್ರಖರ ಬಿಂಬದ ಆಕಾರದ ಮೇಲೆ ಇದರಿಂದಾಗುವ  ಪರಿಣಾಮವನ್ನು ಗಮನಿಸಿರಿ. ಆಶ್ಚರ್ಯವಾಗುವಂಥದ್ದು ಏನೂ ಇಲ್ಲ: ಪ್ರಕಾಶಮಾನ ಬಿಂಬದ ಆಕಾರವು  ಮಡಿಕೆಯಲ್ಲಿನ ಆಕಾರದಂತೆ ಬದಲಾಗುವುದು- ಚೌಕಾಕಾರ, ವೃತ್ತಾಕಾರ, ನಕ್ಷತ್ರಾಕಾರ ಅಥವಾ ತ್ರಿಭುಜಾಕಾರ. 
 
   ಈಗ ನೋಡಿ ಅಚ್ಚರಿಯ ಸಂಗತಿ:  ಈಗ ಬಿಂಬವು ಬೀಳುತ್ತಿರುವ ಮೇಲ್ಮೈ ಮತ್ತು ಕನ್ನಡಿಯ ನಡುವೆ ಇರುವ  ದೂರವನ್ನು ಸುಮಾರು ೮ ರಿಂದ ೧೦ ಮೀಟರ್‌ಗೆ ಹೆಚ್ಚಿಸಿ. ವ್ಯಕ್ತಿಯೊಬ್ಬನ  ವಸ್ತ್ರವನ್ನು ಪ್ರಕಾಶಮಾನ ಬಿಂಬವನ್ನು ಸೆರೆಹಿಡಿಯುವ ಮೇಲ್ಮೈ ಆಗಿ ಬಳಸಿದ್ದರೆ, ಸೂರ್ಯನ ಪ್ರಖರ ಬಿಂಬ ಆಕಸ್ಮಿಕವಾಗಿ ಕಣ್ಣುಗಳ ಮೇಲೆ ಬಿದ್ದು ಹಾನಿಯಾಗುವುದನ್ನು ತಡೆಗಟ್ಟಲು, ವ್ಯಕ್ತಿಯ ಬೆನ್ನು ಕನ್ನಡಿಗೆ ಎದುರಾಗುವಂತೆ ಇರಬೇಕು. ಈಗ ಪ್ರಕಾಶಮಾನವಾದ ಬಿಂಬದ ಆಕಾರ ಏನಾಗುವುದು ಎಂದು ಗಮನಿಸಿ. ಮಡಿಕೆಯಲ್ಲಿ ಕತ್ತರಿಸಿದ ಆಕಾರ ಯಾವುದೇ ಇರಲಿ (ಚೌಕ, ವೃತ್ತ, ತ್ರಿಭುಜ ಅಥವಾ ನಕ್ಷತ್ರ), ಬಿಂಬದ ಆಕಾರ ವೃತ್ತಾಕಾರವೇ ಆಗಿರುವುದು! ತ್ರಿಭುಜಾಕಾರದ ಮಡಿಕೆಯನ್ನು ಕನ್ನಡಿಯ ಮೇಲಿಟ್ಟು, ಮೇಲ್ಮೈಯನ್ನು ಹಿಂದೆ ಮುಂದೆ ಚಲಿಸಿದಾಗ, ಮೇಲ್ಮೈಗೆ ಹತ್ತಿರವಿದ್ದಾಗ ತ್ರಿಭುಜಾಕಾರವಾಗಿರುವ ಬಿಂಬವು ದೂರ ಸರಿದಾಗ ವೃತ್ತಾಕಾರಕ್ಕೆ ಬದಲಾಗುವುದನ್ನು ಗಮನಿಸಿ೩. ಇದನ್ನು ಚೌಕ ಮತ್ತು ನಕ್ಷತ್ರ ಆಕಾರವುಳ್ಳ ಮಡಿಕೆಗಳೊಡನೆ ಮತ್ತೆ ಮಾಡಿರಿ.
 
ವಿವರಣೆ:- ವೃತ್ತಾಕಾರದ ಬಿಂಬವು ಬೇರೇನೂ ಅಲ್ಲ ಸೂರ್ಯನ ಅಸಲಿ ಬಿಂಬವೇ! ಇದನ್ನು ಪ್ರಕಾಶಮಾನವಾದ ದೀಪ ಅಥವಾ ಟಾರ್ಚ್‌ನ ಬೆಳಕಿನೊಂದಿಗೆ ಕತ್ತಲ ಕೊಠಡಿಯಲ್ಲಿ ಇದೇ ರೀತಿಯ ಪ್ರಯೋಗದಿಂದ ಮನವರಿಕೆಯಾಗುವಂತೆ ಪ್ರದರ್ಶಿಸಬಹುದಾಗಿದೆ೪. ಕತ್ತಲ ಕೊಠಡಿಯ ಒಂದು ಗೋಡೆಯಿಂದ ಸಾಕಷ್ಟು ದೂರವಿರುವ ಕನ್ನಡಿಯು ದೀಪ ಅಥವಾ ಟಾರ್ಚ್ ಬೆಳಕಿನ ಬಿಂಬವನ್ನು ಪ್ರಕ್ಷೇಪಿಸುತ್ತದೆ. ಹಲವಾರು ಶತಮಾನಗಳಿಂದಲೂ ’ಸೂಜಿರಂಧ್ರ ಬಿಂಬಗ್ರಾಹಿ’೫ಯ (Pin hole camera) ಬಗ್ಗೆ ನಮಗೆ ತಿಳಿದಿದೆಯಲ್ಲದೆ ಅಧಿಕ ದೂರದ ವಿಶಾಲ ( deep field ) ಪ್ರದೇಶದ ದೃಶ್ಯದ ಛಾಯಾಗ್ರಹಣಕ್ಕೆ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ’ಸೂಜಿ-ರಂಧ್ರ’ ಪರಿಕಲ್ಪನೆಯನ್ನೇ ಅನುಸರಿಸುತ್ತಾ ರಟ್ಟು ಕಾಗದದಲ್ಲ್ಲಿ ದ ರಂಧ್ರಗಳನ್ನು ಮಾಡಿ ಸೂರ್ಯನ ಬಿಂಬವನ್ನು ಪ್ರಕ್ಷೇಪಿಸಲು ಬಳಸಬಹುದು೪,೬,೭. ಪ್ರಕೃತಿಯಲ್ಲಿಯೂ ಸೂಜಿ-ರಂಧ್ರಗಳಿವೆ. ಉದಾ: ಮರದ ಎಲೆಗಳ ನಡುವೆ ಉಂಟಾದ ಬೆಳಕಿಂಡಿಗಳು೭. ಮಾಯಾ ಕನ್ನಡಿಯು ಗೋಡೆ/ ಪ್ರಕ್ಷೇಪಣಾ ತೆರೆಯಿಂದ ಸೂಕ್ತ ದೂರದಲ್ಲಿದ್ದಾಗ ಅಂತಹ ಸೂಜಿ-ರಂಧ್ರದಂತೆಯೇ ವರ್ತಿಸುತ್ತದೆ೮. ನಾವು ಯೋಚನೆ ಮಾಡಿದರೆ ಸೂಜಿ-ರಂಧ್ರಕ್ಕಿಂತ ಕನ್ನಡಿಯು ಎಷ್ಟೋ ಪಟ್ಟು ದೊಡ್ಡದಾಗಿದ್ದರೂ ಈ ಜಾದೂ ಆಗಲು ಮುಖ್ಯ ಕಾರಣ  ರಂಧ್ರ ಅಥವಾ ಕನ್ನಡಿಯ ಅಳತೆ ಅಲ್ಲ , ಅದು ಕನ್ನಡಿಯ ಅಳತೆ ಮತ್ತು ಪ್ರಕ್ಷೇಪಣಾ ತೆರೆಗಳ ನಡುವಿನ ದೂರಗಳ ಅನುಪಾತಕ್ಕೆ ಸಂಬಂಧಿಸಿದ್ದು, ಈ ಅನುಪಾತವು ಜಾಸ್ತಿ ಆಗಿರಬೇಕಾಗುತ್ತದೆ. 
19016 ನೊಂದಾಯಿತ ಬಳಕೆದಾರರು
7425 ಸಂಪನ್ಮೂಲಗಳು