ಪ್ರಾಣಿಗಳ ನೆರಳು ಗೊಂಬೆಯಾಟ

Resource Info

ಮೂಲ ಮಾಹಿತಿ

ಪ್ರಾಥಮಿಕ ಶಾಲಾ ಮಟ್ಟದಲ್ಲೂ ಮಕ್ಕಳು ಕೆಲವೊಂದು ಪ್ರಾಣಿಗಳು ಮತ್ತು ಹಕ್ಕಿಗಳ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದು ಕೊಂಡಿರುತ್ತಾರೆ.  ಶಾಲೆಯಲ್ಲಿ ಮಕ್ಕಳಿಗೆ ವ್ಯವಸ್ಥಿತವಾಗಿ ಬೋಧಿಸಿ ಇದನ್ನು ಇನ್ನಷ್ಟು ನಿಖರವಾಗಿ ತಿಳಿಸಬಹುದು ಮತ್ತು ಮಕ್ಕಳ ಜ್ಞಾನ ಸಮೃದ್ಧಿಯನ್ನು ಮಾಡಬಹುದು.  ಉಪಾಧ್ಯಾಯರು ಆರಂಭಕ್ಕೆ ಪ್ರಾಣಿ ಪಕ್ಷಿಗಳ ಬಗ್ಗೆ ಸಾಮಾನ್ಯ ಪರಿಚಯ ಮಾಡಿಕೊಡಬೇಕು.

ಕಾಲಾವಧಿ: 
(ಇಡೀ ದಿನ)
ಪೀಠಿಕೆ: 

ಕಲೆ ಮತ್ತು ಕರಕುಶಲಕಲೆ ಬಳಸಿ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಕುರಿತು ಪಾಠವನ್ನು ಹೆಚ್ಚು ಸ್ವಾರಸ್ಯಕರವಾಗಿ ಮಾಡಬಹುದು.  ಬೇರೆ ಬೇರೆ ತರಹದ ಚಿತ್ರಗಳು ರಟ್ಟು ಮತ್ತು ಕ್ರಯಾನ್ ಗಳಿಂದ ಬರೆದ ಚಿತ್ರಗಳು ಚಿತ್ರ ಸಂಗ್ರಹಣೆ ಧ್ವನಿಗಳನ್ನು ಕೇಳಿ ಹಕ್ಕಿ ಮತ್ತು ಪ್ರಾಣಿಗಳನ್ನು ಗುರುತಿಸುವುದು ಇವೆಲ್ಲಾ ಅವರ ಮನಸ್ಸಿನಲ್ಲಿ ವಿಷಯವು ಅಚ್ಚೊತ್ತುವಂತೆ ಮಾಡುತ್ತವೆ.

ಉದ್ದೇಶ: 
  1. ಮಕ್ಕಳ ಸೃಜನಶೀಲತೆ ಹಾಗೂ ಕಲ್ಪನಾಶಕ್ತಿಯನ್ನು ಹೆಚ್ಚಿಸುತ್ತದೆ;
  2. ಮಕ್ಕಳು ತಮ್ಮ ಕೈಗಳನ್ನು ಕುಶಲವಾಗಿ ಮತ್ತು ಕಲಾತ್ಮಕವಾಗಿ ಬಳಸುವುದನ್ನು ಕಲಿತುಕೊಳ್ಳುತ್ತಾರೆ;
  3. ಮಕ್ಕಳ ಪಾತ್ರಾಭಿನಯವು ಅವರ ಅಭಿನಯ ಕೌಶಲವನ್ನು ಹೆಚ್ಚಿಸುತ್ತದೆ.
ಚಟುವಟಿಕೆ ಹಂತಗಳು: 

ನೆರಳಿನಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳು:

     ಮಕ್ಕಳು ಬಹಳವಾಗಿ ನೋಡಿರಬಹುದಾದ ಪ್ರಾಣಿಗಳು ಮತ್ತು ಪಕ್ಷಿಗಳ ಹೆಸರನ್ನು ಹೇಳಿ ಚರ್ಚೆ ಪ್ರಾರಂಭಿಸಿ.  ಉದಾ: ನಾಯಿ, ಬೆಕ್ಕು, ಕಾಗೆ, ಪಾರಿವಾಳ, ಇತ್ಯಾದಿ.  ಇಲ್ಲಿ ಉಪಾದ್ಯಾಯರು ಪ್ರಾಣಿಗಳ ನೆರಳುಗೊಂಬೆಯಾಟ ತೋರಿಸಿ ಹೊಸ ವಿಧಾನದ ಕಲಿಯುವ ರೀತಿಯನ್ನು ಕುರಿತು ಮಕ್ಕಳೊಂದಿಗೆ ಮಾತನಾಡಬಹುದು.  ಗೊಂಬೆ ತಯಾರಿಕೆಯಲ್ಲಿ ವಿದ್ಯಾರ್ಥಿಗಳನ್ನೂ ಸೇರಿಸಿಕೊಂಡರೆ ಇನ್ನೂ ಸ್ವಾರಸ್ಯಕರವಾಗುತ್ತದೆ.  ಇದಕ್ಕಾಗಿ ಅವರಿಗೆ ರಟ್ಟು, ಅಂಟು, ಸಣ್ಣ ಮೊಳೆಗಳು ಮತ್ತು ಕಡ್ಡಿಗಳು ಬೇಕಾಗುತ್ತವೆ.

     ಮಕ್ಕಳು ಗೋಡೆಯನ್ನೇ ಪರದೆಯಾಗಿ ಬಳಸಬಹುದು ಅಥವಾ ಗೋಡೆ ಮೇಲೆ ಒಂದು ಬಿಳಿ ಪರದೆಯನ್ನು ಅಂಟಿಸಿಕೊಳ್ಳಬಹುದು.  ಈ ಕೈಗೊಂಬೆಗಳ ಚಲನವಲನಗಳನ್ನು ಚೆನ್ನಾಗಿ ಗಮನಿಸಲು ಒಂದು ಪ್ರಖರವಾದ ಮತ್ತು ಒಂದೇ ಹೊನಲಿನ ಬೆಳಕು ಬೇಕಾಗುತ್ತದೆ.  ವಿವಿಧ ಪ್ರಾಣಿಗಳು ಮತ್ತು ಹಕ್ಕಿಗಳ ಧ್ವನಿಗಳನ್ನು ರೆಕಾರ್ಡು ಮಾಡಿಕೊಳ್ಳಲು ಶಿಕ್ಷಕರು ಏರ್ಪಾಡು ಮಾಡಿಕೊಳ್ಳಬೇಕು  ಮತ್ತು ಆಯಾ ಪ್ರಾಣಿ ಅಥವಾ ಪಕ್ಷಿಯ ಚಲನದೊಂದಿಗೆ ಇದನ್ನೂ ಹಾಡಿಸಬೇಕು.  ಅಂಥ ಸೌಕರ್ಯ ಇಲ್ಲದೇ ಹೋದಲ್ಲಿ ಶಿಕ್ಷಕರು ತಮ್ಮದೇ ಕೈ ಬಳಸಿ ಪ್ರಾಣಿಗಳ ನೆರಳುಗಳನ್ನು ಮೂಡಿಸಬೇಕು.  ಈ ಪ್ರಯೋಗಕ್ಕೆ ಒಂದು ಪರದೆ ಹಾಗೂ ದೀಪದ ಬೆಳಕು ಬಹಳ ಅತ್ಯಗತ್ಯ.

ಹುಡುಕಿ ಹಾಗೂ ಇನ್ನಷ್ಟು ಕಲಿಯಿರಿ:

     ಶಿಕ್ಷಕರು ತರಗತಿಯನ್ನು ಅನೇಕ ಗುಂಪುಗಳಾಗಿ ವಿಂಗಡಿಸಬೇಕು ಮತ್ತು ಪ್ರತಿಯೊಂದು ಗುಂಪಿಗೂ ಒಂದೊಂದು ಅಷ್ಟೊಂದು ಪರಿಚಿತವಲ್ಲದ ಪ್ರಾಣಿ ಅಥವಾ ಹಕ್ಕಿಯ ಹೆಸರನ್ನು ಇಡಬೇಕು.  ಪ್ರತಿಯೊಂದು ಗುಂಪು ಈಗ ಆ ಪ್ರಾಣಿಯ ಭಾವ ಚಿತ್ರ ಮತ್ತು ಚಿತ್ರಗಳನ್ನು ಅವುಗಳ ಬಗ್ಗೆ ಸಾಧ್ಯವಾದ ಎಲ್ಲಾ ಮಾಹಿತಿಗಳೊಂದಿಗೆ ಸಂಗ್ರಹಿಸಲು ಪ್ರಾರಂಭಿಸತಕ್ಕದ್ದು.  ಅವರು ಕಂಪ್ಯೂಟರ್ ಲಭ್ಯವಿದ್ದರೆ ಸಿಡಿ ರೋಂ.ಆಗಿ ಅಥವಾ ಪುಸ್ತಕವಾಗಿ ದೊರೆತ ಪ್ರಾಣಿಗಳ ಸಚಿತ್ರ ವಿಶ್ವ ಕೋಶಗಳನ್ನು ಓದಿ ನೋಡಬಹುದು.  ಇದಲ್ಲದೆ ವನ್ಯಜೀವಿಗಳನ್ನು ಕುರಿತು ಸಾಕಷ್ಟು ಮಾಹಿತಿ ಕೊಡಬಲ್ಲ ವೆಬ್ ಸೈಟುಗಳು ಸಾಕಷ್ಟಿವೆ.  ಮಕ್ಕಳಿಗೆ ಅಂತರ ಜಾಲವನ್ನು ನೋಡಲು ಅವಕಾಶವಿದ್ದರೆ, ಉಪಾಧ್ಯಾಯರು ಅವರಿಗೆ ಹುಡುಕಿ ಕೊಡಬಹುದಾದ ಅಂತರ್ ಜಾಲ ತಾಣಗಳ ಹೆಸರುಗಳನ್ನು ಅವರಿಗೆ ನೀಡಬಹುದು.

     ಅವರು ಆ ತರುವಾಯ ತಮ್ಮ ತಮ್ಮ ಬಳಿಯಲ್ಲಿರುವ ಮಾಹಿತಿಯನ್ನು ತಾವೆಲ್ಲರೂ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳಬಹುದು ಮತ್ತು ಒಬ್ಬ ಗುಂಪಿನ ನಾಯಕನನ್ನು ನೇಮಿಸಿ ಆತ ಅವುಗಳನ್ನೆಲ್ಲಾ ಇಡೀ ತರಗತಿಯಲ್ಲಿ ಮಂಡಿಸಬಹುದು.  ಈಗ ಶಿಕ್ಷಕರು ತರಗತಿಯಲ್ಲಿ ಚರ್ಚಿಸಬಹುದಾದ ವಿಷಯಗಳನ್ನು ಪರಿಚಯ ಮಾಡಿಕೊಡಬೇಕು.

     ವಿವಿಧ ಪ್ರದೇಶಗಳಲ್ಲಿ ಕಂಡುಬರುವ ಪ್ರಾಣಿಗಳು ಮತ್ತು ಪಕ್ಷಿಗಳು,ದೈಹಿಕ ಮತ್ತು ನಿವಾಸಿ ವ್ಯತ್ಯಾಸಗಳು, ಶಿಕ್ಷಕರು ಬೆಟ್ಟಗಾಡು ಪ್ರದೇಶದಲ್ಲಿ ಕಂಡು ಬರುವ ಪ್ರಾಣಿಗಳು ಮತ್ತು ಪಕ್ಷಿಗಳು ಬಯಲುನಾಡಿನ ಪ್ರಾಣಿಗಳ ಮತ್ತು ಪಕ್ಷಿಗಳಿಗಿಂತ ಭಿನ್ನವಾದ ಲಕ್ಷಣಗಳನ್ನು ಹೊಂದಿರುತ್ತವೆ  ಎಂದು ಮಕ್ಕಳಿಗೆ ಹೇಳಿಕೊಡಬೇಕು.  ಉದಾಹರಣೆಗೆ: ಪರ್ವತ ಪ್ರದೇಶದ ಪ್ರಾಣಿಗಳು ತಮ್ಮನ್ನು ಚಳಿಯಿಂದ ರಕ್ಷಿಸಿಕೊಳ್ಳಲು ಬಹಳ ತುಪ್ಪಳವನ್ನು ಹೊಂದಿರುತ್ತವೆ.

  1. ಪ್ರಾಣಿಗಳು ಮತ್ತು ಪಕ್ಷಿಗಳ ವಿವಿಧ ಬಗೆಯ ಧ್ವನಿಗಳು ಮತ್ತು ಕೂಗುಗಳು;
  2. ಬೇರೆ ಬೇರೆ ಪ್ರಾಣಿಗಳು ಮತ್ತು ಪಕ್ಷಿಗಳು ಸೇವಿಸುವ ವಿವಿಧ ಬಗೆಯ ಆಹಾರಗಳು;
  3. ಸಾಕು ಪ್ರಾಣಿ ಮತ್ತು ಪಕ್ಷಿಗಳು, ಇತ್ಯಾದಿ.- ಅವುಗಳ ಬಗ್ಗೆ ತಿಳಿದು ಕೊಳ್ಳಲು ಇನ್ನಷ್ಟು ಪ್ರಯತ್ನ ಪಡಿ.
  1. ವಿದ್ಯಾರ್ಥಿಗಳ ಕಲ್ಪನಾ ಶಕ್ತಿ ಮತ್ತು ಸೃಜನಾ ಕೌಶಲ್ಯಗಳನ್ನು ಹೆಚ್ಚಿಸುವುದಕ್ಕೆ ಸಹಾಯ ಮಾಡಲು ಅವರಿಗೆ ಅತಿ ಪರಿಚಯವುಳ್ಳ ಪ್ರಾಣಿಗಳು ಮತ್ತು ಪಕ್ಷಿಗಳ ಮಾದರಿಗಳನ್ನು ತಯಾರಿಸಲು ಕೇಳಬಹುದು.  ಇದಕ್ಕಾಗಿ ಅವರಿಗೆ ಪ್ಲಾಸ್ಟಿಸಿನ್, ಜೇಡಿಮಣ್ಣು, ರಟ್ಟು, ಸ್ವಲ್ಪ ಸಣ್ಣ ಹಾಗೂ ಗಟ್ಟಿಯಾದ ಕಡ್ಡಿಗಳು ಹಾಗೂ ಒಂದಿಷ್ಟು ಬಣ್ಣ ಬೇಕಾಗುತ್ತದೆ;
  2. ಪ್ರಾಣಿ ಮತ್ತು ಪಕ್ಷಿ ಪ್ರಪಂಚದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಮಕ್ಕಳು ಕಥೆ ಹೇಳುವ ಒಂದು ಕಾರ್ಯಕ್ರಮವನ್ನು  ಏರ್ಪಡಿಸಬಹುದು.  ಇಲ್ಲಿ ಜಾನಪದ ಕತೆಗಳು, ಪುರಾಣ ಕಥೆಗಳು ಬಹಳ ಸಹಾಯಕ್ಕೆ ಬರುತ್ತವೆ.  ಶಿಕ್ಷಕರು ತಮ್ಮ ಕಲ್ಪನಾಶಕ್ತಿಯನ್ನು ಬಳಸಿ ಜನ ಸಾಮಾನ್ಯ ಮತ್ತು ಅಸಾಮಾನ್ಯ ಪ್ರಾಣಿಗಳ ಸಣ್ಣಕತೆಗಳನ್ನು ಹೆಣೆಯಬಹುದು.  ಕತೆಯ ಕೊನೆಯಲ್ಲಿ ಮಕ್ಕಳು ಈ ಪ್ರಾಣಿಗಳ ಹೆಸರುಗಳನ್ನು ಪಟ್ಟಿ ಮಾಡಿ ಅವುಗಳನ್ನು ಗುರುತಿಸಲು ಹೇಳಬೇಕು;
  3. ಪಾತ್ರಾಭಿನಯವು ಇನ್ನೊಂದು ಸ್ವಾರಸ್ಯಕರ ಚಟುವಟಿಕೆಯಾಗಿರುತ್ತದೆ ಮತ್ತು ಮಕ್ಕಳಿಗೆ ಪ್ರಾಣಿಗಳು ಮತ್ತು ಪಕ್ಷಿಗಳ ಪರಿಚಯ ಚೆನ್ನಾಗಿ ಆಗುತ್ತದೆ.  ಶಿಕ್ಷಕರು ಮಕ್ಕಳಿಗೆ ಪ್ರಾಣಿಗಳು ಮತ್ತು ಪಕ್ಷಿಗಳ ಬಗ್ಗೆ ಬಹಳ ವಿಷಯಗಳನ್ನು ತಿಳಿಸುವ ಒಂದು ನಿರ್ದಿಷ್ಟ ಕತೆಯನ್ನು ಹೇಳಬೇಕು.  ಅವುಗಳಲ್ಲಿ ಒಂದರ ಪಾತ್ರವನ್ನು ಅವರು ಮಾಡಿ ಇತರೆ ಪಾತ್ರಗಳನ್ನು ವಿದ್ಯಾರ್ಥಿಗಳಿಗೆ ವಹಿಸಿಕೊಡಬೇಕು.  "ಲಿಟಲ್ ರೆಡ್ ರೈಡಿಂಗ್ ಹುಡ್ " ನಂತಹ ಕಥೆಗಳು ಈ ಉದ್ದೇಶಕ್ಕೆ ಚೆನ್ನಾಗಿ ಒಗ್ಗುತ್ತದೆ.
  4. ಶಿಕ್ಷಕರು ಮಕ್ಕಳಿಗೆ ಪ್ರಾಣಿಗಳು ಮತ್ತು ಪಕ್ಷಿಗಳ ಕೆಲವೊಂದು ಪಟ್ಟಿಗಳನ್ನು ಪ್ರತ್ಯೇಕವಾಗಿ ನೀಡಬೇಕು ಮತ್ತು ಪ್ರತಿಯೊಂದು ಪಟ್ಟಿಯಲ್ಲಿ ಇತರ ಪ್ರಾಣಿ ಅಥವಾ ಪಕ್ಷಿಗಳಿಗಿಂತ ಭಿನ್ನವಾದ ಕೆಲವು ಹೆಸರುಗಳನ್ನು ಅವುಗಳಿಗೆ ಸೇರಿಸಬೇಕು ಮತ್ತು ಅವು ಇತರೆ ಪ್ರಾಣಿ ಮತ್ತು ಪಕ್ಷಿಗಳಿಗಿಂತ ಏಕೆ ಭಿನ್ನ ಎಂದು ವಿವರಿಸಬೇಕು.

     ಇವೇನಿದ್ದರು ಕೆಲವೊಂದು ಸಂಭಾವ್ಯ ನಿದರ್ಶನಗಳು ಮಾತ್ರ.  ಪ್ರಾಣಿ ಮತ್ತು ಪಕ್ಷಿಗಳ ಬಗ್ಗೆ ಪಾಠ ಮಾಡಲು ಇತರೆ ವಿಧಾನಗಳಿವೆ.  ಕಲಿಕೆಯು ಸ್ವಾರಸ್ಯಕರವಾಗಲು ಮತ್ತು ಮನದಟ್ಟಾಗಿಸುವಂತಾಗಿಸಲು ಶಿಕ್ಷಕರು ತನ್ನ ಸೃಜನಾತ್ಮಕ ಕಲ್ಪನಾಶಕ್ತಿಯ ಬತ್ತಳಿಕೆಯನ್ನು ಚೆನ್ನಾಗಿ ಬಳಸಿಕೊಳ್ಳಬೇಕು.

---

ಲೇಖನವು ಮೊದಲು ಟೀಚರ್ಸ್ ಪ್ಲಸ್, ಸಂಚಿಕೆ -.63, ನವೆಂಬರ್ ಡಿಸೆಂಬರ್ 1999 ರಲ್ಲಿ ಪ್ರಕಟವಾಗಿದೆ ಮತ್ತು ಅದನ್ನು ಇಲ್ಲಿ ಕೆಲವು  ಬದಲಾವಣೆಗಳೊಂದಿಗೆ ಇಲ್ಲಿ ಅಳವಡಿಸಿಕೊಳ್ಳಲಾಗಿದೆ.

18611 ನೊಂದಾಯಿತ ಬಳಕೆದಾರರು
7272 ಸಂಪನ್ಮೂಲಗಳು