ಪ್ರಶ್ನೆಗಳ ಫಲಕ

Resource Info

ಮೂಲ ಮಾಹಿತಿ

ಒಂದು ತರಗತಿಯನ್ನು ಅಲ್ಲಿನ ಮಕ್ಕಳು  ಪರಸ್ಪರ ಒಡನಾಡುವಂತೆ ಮಾಡದಿದ್ದರೆ, ಇದು ಬಹಳ ನೀರಸ ಮತ್ತು ಲವಲವಿಕೆಯಿಲ್ಲದ ತರಗತಿಯಾಗುತ್ತದೆ. ನನ್ನ ವಿದ್ಯಾರ್ಥಿಗಳು ಮನಬಿಚ್ಮಚಿ ಮಾಡನಾಡಿ ಮುಂಬಂದು ಕೆಲಸ ಮಾಡಲು, ನಾನು ಅವರಿಗೆ  ಸ್ವಲ್ಪ ಅನಿರ್ಭಂದಿತ ಅವಕಾಶ ನೀಡಬೇಕಾಗುತ್ತದೆ. 

Abstract/Short description: 
(ಇಡೀ ದಿನ)
Abstract/Short description: 

ಒಂದು ತರಗತಿಯನ್ನು ಅಲ್ಲಿನ ಮಕ್ಕಳು  ಪರಸ್ಪರ ಒಡನಾಡುವಂತೆ ಮಾಡದಿದ್ದರೆ, ಇದು ಬಹಳ ನೀರಸ ಮತ್ತು ಲವಲವಿಕೆಯಿಲ್ಲದ ತರಗತಿಯಾಗುತ್ತದೆ. ನನ್ನ ವಿದ್ಯಾರ್ಥಿಗಳು ಮನ ಬಿಚ್ಚಿ ಮಾಡನಾಡಿ ಮುಂಬಂದು ಕೆಲಸ ಮಾಡಲು, ನಾವು ಅವರಿಗೆ  ಸ್ವಲ್ಪ ಅನಿರ್ಬಂಧಿತ ಅವಕಾಶ  ನೀಡಬೇಕಾಗುತ್ತದೆ. 

Abstract/Short description: 

ಮೂಲಭೂತ ಬದಲಾವಣೆಯೇನೂ ಇಲ್ಲ

ನಾನು ತರಗತಿಯಲ್ಲಿ ಖಾಲಿ ಪಟವನ್ನು ಹಾಕಿದೆ. ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲಿ ಬಗೆಹರಿಯದೆ  ಉಳಿದ ನನ್ನ ಪಾಠದ ವಿಷಯಕ್ಕೆ  (ವಿಜ್ಞಾನ) ಸಂಬಂಧಿಸಿದ ಅಥವಾ  ಸಂಬಂಧವಿಲ್ಲದ ಯಾವುದೇ ಪ್ರಶ್ನೆಗಳನ್ನು ಅದರಲ್ಲಿ ಬಂದು ಬರೆಯಲು ಹೇಳಿದೆ.

ಒಂದು  ,ಎರಡುದಿನಗಳ  ಒಳಗೆ, ಅರ್ಧ ಪಟದಲ್ಲಿ ಪ್ರಶ್ನೆಗಳು  ತುಂಬಿ ಹೋಗಿದ್ದವು.

 

ಅವರ ಅನುಮಾನಗಳು ವಿವಿಧ ಮತ್ತು  ಆಸಕ್ತಿಕರವಾಗಿದ್ದವು. ಉದಾಹರಣೆಗೆ

  • ·          ಪರಮಾಣು ಸಂಖ್ಯೆ ಮತ್ತು ದ್ರವ್ಯರಾಶಿ ಸಂಖ್ಯೆ ಹೇಗೆ  ಕಂಡುಹಿಡಿಯುವುದು?
  • ·         ಆರ್ಕಿಡ್ ಎಂಬುದರ ಅರ್ಥವೇನು?
  • ·         ಚೀತಲ್ ಜಿಂಕೆಗೆ ಕನ್ನಡ ಹೆಸರೇನು?
  • ·         ಚೆನ್ನಾಗಿ ವ್ಯಾಸಂಗ ಮಾಡುವುದು ಹೇಗೆ
  • ·         ಇದೇ ಚಿರತೆ, ಇದು ಚೀತಾ ಮತ್ತು ಇದು  ಜಗ್ವಾರ್ ಎಂದು ಹೇಗೆ ಗುರುತಿಸುವುದು?
  • ·         ಮನುಷ್ಯ ಎಂದರೇನು?

 

ಮತ್ತು  ಒಂದು ವಾರದ ಒಳಗೆ , ನಾನು ಮತ್ತೊಂದು ಪಟ್ಟಿಯನ್ನು  ಅಂಟಿಸ ಬೇಕಾಗಿ ಬಂತು!

ಅದಷ್ಟೇ ಅಲ್ಲ , ಯಾವುದಕ್ಕೂ ಮುಂದೆ ಬಾರದ ಕೊನೆ ಬೆಂಚಿನ ಹುಡುಗರು  ಉತ್ಸಾಹದಿಂದ ಭಾಗವಹಿಸಲು ಮುಂದೆ ಬಂದರು.

ಅವರು ಕೇಳಿದ ಪ್ರಶ್ನೆಕೂಡ ಚೆನ್ನಾಗಿತ್ತು.

' ಬೆಂಕಿ ಜ್ವಾಲೆಯು  ಏಕೆ ಕೆಳಮುಖವಾಗಿ ಉರಿಯುವುದಿಲ್ಲ? ಅವು ಗಳ ಮೇಲೆ ಗುರುತ್ವಾಕರ್ಷಣೆ ಪರಿಣಾಮ ಬೀರುವುದಿಲ್ಲವೆ?

 

ಈಗ, ಒಬ್ಬ ಶಿಕ್ಷಕನಾಗಿ,ಅವರ ಉತ್ಸಾಹವನ್ನುಜೀವಂತವಾಗಿ  ಇರಿಸಿಕೊಳ್ಳಲು , ನಾನು ಉತ್ತರಗಳನ್ನು ಒದಗಿಸುವ  ಸಲುವಾಗಿ ಅಥವಾ ಅದನ್ನು ಅವರೇ ಕಂಡುಕೊಳ್ಳಲು ಸಹಾಯ ಮಾಡುವುದಕ್ಕಾಗಿ ಸ್ವಲ್ಪ  ಹೋಮ್ವರ್ಕ್  ಮಾಡಬೇಕಾಗಿ ಬಂತು.

 

ಒಬ್ಬ  ಶಿಕ್ಷಕನಿಗೆ , ಇದಕ್ಕಿಂತ ಹೆಚ್ಚಿನ ತೃಪ್ತಿ ಬೇರೆ ಇನ್ನೇನಿದೆ?

 

 

18465 ನೊಂದಾಯಿತ ಬಳಕೆದಾರರು
7225 ಸಂಪನ್ಮೂಲಗಳು