ಪೆನ್ಸಿಲ್, ಸ್ಕೇಲ್, ತೂಕದ ತಕ್ಕಡಿ
Resource Info
ಮೂಲ ಮಾಹಿತಿ
ಕೋನಗಳು ಮತ್ತು ಉದ್ದದ ಅಳತೆಯ ಹೊರತಾಗಿ, ನಮ್ಮ ಜ್ಯಾಮಿತಿ ಬಾಕ್ಸ್ ಉಪಕರಣಗಳನ್ನು ಬಳಸಿ ವಸ್ತುಗಳ ತೂಕವನ್ನು ಹೋಲಿಸಿ ನೋಡಬಹುದೇ? ಇಲ್ಲಿ ಹಳೆಯ ಆಟದ ಹೊಸ ನೋಟ ನೀಡಲಾಗಿದೆ.
ವಿದ್ಯಾರ್ಥಿಯು , ಸಮತೋಲನ, ಹೋಲಿಕೆ ,ಊಹೆ ಮತ್ತು ಅಂದಾಜಿಸುವುದನ್ನು ಮನದಟ್ಟು ಮಾಡಿಕೊಳ್ಳಲು ಸಹಾಯ ಮಾಡುವುದು.
ಬೇಕಾಗುವ ಸಾಮಾಗ್ರಿ:
ವಿದ್ಯಾರ್ಥಿಗಳು ಸೀಸದಕಡ್ಡಿ ಮೇಲೆ ಒಂದು ಅಳತೆ ಸ್ಕೇಲನ್ನು ಸಮತೋಲನ ಮಾಡಿ ಇರಿಸಲು ಪ್ರಯತ್ನಿಸಲಿ
ಯಾವ ಗೆರೆ ಮೇಲೆ ಇಟ್ಟರೆ ಸಮವಾಗಿ ನಿಲ್ಲುತ್ತದೆ ಎಂಬುದನ್ನು ಅವರು ಗಮನಿಸಿ ಬರೆದಿಟ್ಟುಕೊಳ್ಳಲಿ.
ಈ ಸಂದರ್ಭದಲ್ಲಿ ಇದು 15.1cm ಹತ್ತಿರ ನಿಂತಿದೆ. ಈ ಹಂತವು ಅವರು ಊಹೆ ಮಾಡುವುದಕ್ಕೆ ಮತ್ತು ಅಂದಾಜು ಮಾಡುವುದಕ್ಕೆ ಕಲಿಸುತ್ತದೆ.
ಸ್ಕೇಲು ಅಲುಗಾಡದೇ ನಿಂತಿರಲು ಸಾಧ್ಯವಿಲ್ಲ. ತರಗತಿ ಯೊಳಕ್ಕೆ ಬೀಸುತ್ತಿರುವ ಗಾಳಿ ಇದಕ್ಕೆ ಕಾರಣ ಇರಬಹುದು. ಅದಕ್ಕೆ ಕಾರಣಗಳನ್ನು ಅವರು ಹುಡುಕಲಿ.
ಎರಡೂ ಬದಿಯಲ್ಲಿ ಕೆಲವು ನಾಣ್ಯಗಳನ್ನು ಹಾಕಿ ಮತ್ತು ಹೋಲಿಕೆಯ ಆಟದ ಆರಂಭವಾಗಲಿ.
ಅವರು 'ಮಾನಕ ತೂಕ' ಘಟಕವಾಗಿ ಒಂದು ಕಡೆ ಒಂದು ನಾಣ್ಯ ಇರಿಸಬಹುದು. ಉದಾ: ಒಂದು 2 ರೂಪಾಯಿ ನಾಣ್ಯ .ತದನಂತರ ಅದರೊಂದಿಗೆ ಇತರ ನಾಣ್ಯಗಳ ತೂಕವನ್ನು ಹೋಲಿಸಲಿ.
ಅವರು ತೂಕದಲ್ಲಿ ನಿಖರತೆಯನ್ನು ಸುಧಾರಿಸಲು ಏನು ಮಾಡಬಹುದು ಎಂದು ಪರಿಶೋಧಿಸಲು ಅವಕಾಶ ನೀಡಿ.
ಇಲ್ಲಿ ಇನ್ನೊಂದು ಸಂದರ್ಭತೆಗೆದುಕೊಳ್ಳೋಣ. ಒಂದು ಕಡೆ ಎರಡು 2 ರೂಪಾಯಿ ನಾಣ್ಯಗಳು ಇವೆ ಮತ್ತು ಇನ್ನೊಂದುಕಡೆ ಎರಡು 2 ರೂಪಾಯಿ ನಾಣ್ಯಗಳು ಮತ್ತು ಒಂದು 1 ರೂಪಾಯಿ ನಾಣ್ಯ ಇವೆ. ಇದನ್ನು ಹೇಗೆ ಸಮತೋಲನ ಮಾಡಬಹುದು? ಹಿರಿಯ ವಿದ್ಯಾರ್ಥಿಗಳ ತರಗತಿಗಳಿಗೆ, ಶಿಕ್ಷಕರು ಗುರುತ್ವ ಕೇಂದ್ರದ ಬಗ್ಗೆ ಹೇಳಿಕೊಡಬಹುದು .
ಪೆನ್ಸಿಲ್, ಸ್ಕೇಲು & ನಾಣ್ಯಗಳನ್ನು ಇಟ್ಟುಕೊಂಡು ಮಾಡಲು ಇನ್ನೂ ಹೆಚ್ಚು ಸಾಧ್ಯತೆಗಳು ಇವೆ. ಅವುಗಳನ್ನು ಅವರು ಆನ್ವೇಷಿಸಲಿ.
- ಟೀಕೆ ಬರೆಯಲು ಲಾಗಿನ್ ಆಗಿ ಅಥವಾ ನೋಂದಾಯಿಸಿಕೊಳ್ಳಿರಿ