ಟೂತ್ ಪೇಸ್ಟ್ ತಯಾರಿಸಿ ನೋಡಿ

Resource Info

ಮೂಲ ಮಾಹಿತಿ

ನಾವು ಪ್ರತಿದಿನ ಬಳಸುವ ಟೂತ್ ಪೇಷ್ಟ್ನಲ್ಲಿ ಏನಿದೆ – ನೀವೇ ಸ್ವತಃ ಅದನ್ನು ತಯಾರಿಸಲು ಸಾಧ್ಯ ವಿ ಲ್ಲವೇ? ನಿಮ್ಮ ಅಡುಗೆಮನೆಯಲ್ಲಿ ಕಂಡುಬರುವ ವಸ್ತುಗಳಿಂದ ಸ್ವತಃ ಅದನ್ನು ತಯಾರಿಸಲು ಸಾಧ್ಯ ವಿಲ್ಲವೇ? ಈ ರೋಮಾಂಚಕಾರಿ ಚಟುವಟಿಕೆಯಲ್ಲಿ ಮಕ್ಕಳು ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುವ ವಸ್ತುಗಳಿಂದ ಟೂತ್ಪೇಸ್ಟ್ ಮಾಡುತ್ತಾರೆ. ಇದು ಟೂತ್ ಪೇಸ್ಟ್ನಲ್ಲಿರುವ ವಿವಿಧ ಘಟಕಗಳನ್ನು ಮತ್ತು ಯಾವ ಪಾತ್ರವನ್ನು ಅವು ವಹಿಸುತ್ತವೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಒಂದು ಸಮಗ್ರ ಚಟುವಟಿಕೆಯಾಗಿದ್ದು, ಇದನ್ನು ತರಗತಿಯಲ್ಲಿ ಮಾಡಿಕಲಿ ವಿನೋದವನ್ನು ತರಲು ವಿಜ್ಞಾನ ತರಗತಿಯಲ್ಲಿ ಬಳಸಬಹುದು.

ಕಾಲಾವಧಿ: 
00 hours 30 mins
ಪೀಠಿಕೆ: 

ರಸಾಯನಶಾಸ್ತ್ರ ಅಥವಾ ವಿಜ್ಞಾನವನ್ನು ನಾವೆಲ್ಲರೂ ದಿನನಿತ್ಯ ಮಾಡುವಂತಹುದು ಎಂದು ಮಕ್ಕಳಿಗೆ ಅರ್ಥ ಮಾಡಿಸುವುದು ಈ ಚಟುವಟಿಕೆಯ ಉದ್ದೇಶ ಆಗಿದೆ. ಟೂತ್ಪೇಸ್ಟ್ ನಮ್ಮ ಜೀವನದಲ್ಲಿ ದೈನಂದಿನ ಎಲ್ಲರೂ ಬಳಸುತ್ತಾರೆ.. ನಾವು ಅದನ್ನು ಸರ್ವೇ ಸಾಮಾನ್ಯ ಎಂದು ತೆಗೆದುಕೊಳ್ಳುತ್ತೇವೆ, ಆದರೆ ಅಲ್ಲಿಯೂ ಸಹ ವಿಜ್ಞಾನವಿದೆ. ಬೇಕಿಂಗ್ ಸೋಡಾ ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡುವ ಮೂಲಕ ಇಲ್ಲಿ ಸರಳವಾದ ಟೂತ್ಪೇಸ್ಟ್ ಮಾಡಬಹುದು.

 

ಉದ್ದೇಶ: 
  1. ವಿಜ್ಞಾನವು ದೈನಂದಿನ ಜೀವನದಲ್ಲಿ ಒಂದು ಭಾಗ ಎಂದು ಗುರುತಿಸಲು ವಿದ್ಯಾರ್ಥಿಗೆ ಸಹಾಯ ಮಾಡುವುದು.
  2. ಟೂತ್ಪೇಸ್ಟ್ ಬಳಸುವ ಕೆಲವು ಕಾರಣಗಳು ತಿಳಿಯುವುದು.
  3. ಒಂದು ಟೂತ್ಪೇಸ್ಟ್ನ ಮುಖ್ಯ ಅಂಶಗಳನ್ನು ಮತ್ತು ಅವರು ವಹಿಸುವ ಪಾತ್ರವನ್ನು ನಿರ್ದಿಷ್ಟಪಡಿಸುವುದು.
  4. ಈ ಟೂತ್ಪೇಸ್ಟ್ ಅನ್ನು ತಯಾರಿಸಲು ಬೇಕಾದ ಪದಾರ್ಥಗಳನ್ನು ತಿಳಿಯುವುದು

 

 

ಚಟುವಟಿಕೆ ಹಂತಗಳು: 

ಮೊದಲಿಗೆ ಮಕ್ಕಳನ್ನು ಅವರು ತಮ್ಮ ಹಲ್ಲುಗಳನ್ನು ಉಜ್ಜಿದ್ದಾರಾ ಕೇಳಿಕೊಳ್ಳಿ. ಅವರು ಅದನ್ನು ಏಕೆ ಮಾಡುತ್ತಾರೆ? ಅವರು ಮಾಡದಿದ್ದರೆ ಏನಾಗುತ್ತದೆ? ಟೂತ್ಪೇಸ್ಟ್ ಹೇಗೆ ತಯಾರಿಸಲ್ಪಟ್ಟಿದೆ ಎಂಬುದು ಅವರಿಗೆ ತಿಳಿದಿದೆಯೇ? ನಿಮ್ಮ ಮಾತುಕತೆಯನ್ನು  ಸರಳವಾಗಿ ಇರಿಸಿ. ಟೂತ್ಪೇಸ್ಟ್ 3 ಪ್ರಮುಖ ಪಾತ್ರಗಳನ್ನು ವಹಿಸುತ್ತದೆ - ಸೂಕ್ಷ್ಮಾಣುಗಳನ್ನು ಕೊಲ್ಲುವುದು, ಕೆಟ್ಟ ಉಸಿರನ್ನು ತಡೆಗಟ್ಟುವುದು. ಮತ್ತು ಹಲ್ಲುಗಳನ್ನು ಬಿಳಿಯಾಗಿ ಕಾಪಾಡಿಕೊಳ್ಳುವುದು.

ನಾವು ಈಗ ಒಂದಿಷ್ಟು ಟೂತ್ಪೇಸ್ಟ್ ಮಾಡಲು ಹೋಗುತ್ತೇವೆ ಎಂದು ಹೇಳಿ - ಅದು ಸಾಧ್ಯವೆಂದು ಅವರು ಭಾವಿಸುತ್ತಾರೆಯೇ? ಅವರಿಗೆ  ಖುಷಿಯಾಗುತ್ತದೆಯಾ? ಅವರನ್ನು ಗುಂಪುಗಳಾಗಿ ವಿಭಜಿಸಿ.

ಪ್ರತಿ ಗುಂಪಿಗೂ ಒಂದು ಪ್ಲ್ಯಾಸ್ಟಿಕ್ ಬೌಲ್ ಮತ್ತು ಕೆಲವು ಐಸ್ಕ್ರೀಮ್ ಸ್ಟಿಕ್ಗಳನ್ನು ನೀಡಿ.

ಬೇಕಿಂಗ್ ಸೋಡಾವನ್ನು ತೋರಿಸಿ ಮತ್ತು ಅದರ 4 ಸ್ಪೂನ್ಗಳನ್ನು ಸೇರಿಸಲು ಪ್ರತಿ ಗುಂಪಿಗೂ  ಹೇಳಿ - ಅಡಿಗೆ ಸೋಡಾವು ಸ್ಫಟಿಕದ ಉಪ್ಪು ಎಂದು ತಿಳಿಸಿ ಮತ್ತು ಸ್ವಲ್ಪ ಸೌಮ್ಯ ಮಾರ್ಜಕವಾಗಿ ವರ್ತಿಸುತ್ತದೆ ಮತ್ತು ಹಲ್ಲುಗಳನ್ನು ಸ್ವಚ್ಛಗೊಳಿಸಲುಮತ್ತು ಅದನ್ನು ಬಿಳಿಯಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಕೆಟ್ಟ ವಾಸನೆಯನ್ನು ತೆಗೆದುಹಾಕುವಲ್ಲಿ ಇದು ಸಹಾಯ ಮಾಡುತ್ತದೆ.

 

ಮುಂದೆ ಅವರನ್ನು ಅವರ ದೈನಂದಿನ ಟೂತ್ಪೇಸ್ಟ್ ಪುಡಿಯೇ ಅಥವಾ ಇಲ್ಲವೇ  ಎಂದು ಕೇಳಿರಿ. ಅದನ್ನು ನಾವು ಹೇಗೆ ಪೇಸ್ಟ್ ಮಾಡಬಹುದು? ಸಾಮಾನ್ಯವಾಗಿ ಮಕ್ಕಳು ಅದಕ್ಕೆನೀರನ್ನು ಸೇರಿಸಬಹುದು ಎಂದು ಹೇಳುತ್ತಾರೆ. ತೆಂಗಿನ ಎಣ್ಣೆಯನ್ನು ಸಹ ಸೇರಿಸಬಹುದೆಂದು ತಿಳಿದು ಆಶ್ಚರ್ಯವಾಗಬಹುದು. ತೆಂಗಿನ ಎಣ್ಣೆಯ ಅನುಕೂಲವೆಂದರೆ ಇದು ಸೋಂಕುನಿವಾರಕವಾಗಿದೆ - ಅಂದರೆ ಅದು ಸೂಕ್ಷ್ಮಾಣುಗಳನ್ನು ಕೊಲ್ಲುತ್ತದೆ. ಅವರು ಗ್ಲಿಸರಿನ್ ಅನ್ನು ಬಳಸಬಹುದು, ಏಕೆಂದರೆ ಅದನ್ನು ಬಳಸಲು ಅವರು ಇಷ್ಟಪಡಬಹುದು. 4 ಸ್ಪೂನ್ ತೆಂಗಿನ ಎಣ್ಣೆಯನ್ನು ಸೇರಿಸಲು ಅವರಿಗೆ ಹೇಳಿ.

ಅದನ್ನು ಚೆನ್ನಾಗಿ ಮಿಶ್ರಣ ಮಾಡಿರಿ.

(ಮುಂದಿನ 2 ಹಂತಗಳು ಐಚ್ಛಿಕ)

 

ಅವರು ಉಸಿರು ತಾಜಾ ಮಾಡಲು ಪೆಪ್ಪರ್ ಮಿಂಟ್ ಎಸೆನ್ಸ್ ಮತ್ತು ಸಿಹಿಮಾಡಲು ಕೆಲವು ಹನಿ ಜೇನುತುಪ್ಪ ಬೆರಸಬಹುದು.

ಅವರು ಅರ್ಧ ಚಮಚ ಉಪ್ಪು ಕೂಡ ಸೇರಿಸಬಹುದು - ಇದು ಹಲ್ಲುಗಳಿಗೆ ಸೋಂಕುನಿವಾರಕವಾಗಿ ಮತ್ತು ಅಪಘರ್ಷಕವಾಗಿ ವರ್ತಿಸುತ್ತದೆ

ಇದನ್ನು ಚೆನ್ನಾಗಿ ಮಿಶ್ರಣ ಮಾಡಲು ಹೇಳಿ. ಈಗ ಟೂತ್ ಪೇಸ್ಟ್ ಹಲ್ಲುಜ್ಜುವುದಕ್ಕಾಗಿ ಸಿದ್ಧವಾಗಿದೆ.

ಮಕ್ಕಳಿಗೆ ಖುಷಿಯಾಯಿತೆ  ಅವರನ್ನು ಕೇಳಿ - ಬಳಸಿದ ಪದಾರ್ಥಗಳ ಉಪಯೋಗ  ಹೇಳುವುದಕ್ಕೆ ಸಹಾಯ ಮಾಡಿ, ಅವರು ಅದನ್ನು ಇಷ್ಟಪಟ್ಟರೇ ಎಂದು ಕೇಳಿ - ಯಾವುದೇ ಸುಧಾರಣೆಗಳು ಮಾಡಬಹುದೇ ಯೋಚಿಸಲು ಹೇಳಿ.

 

ಅವರು ಟೂತ್ಪೇಸ್ಟ್ ಮನೆ ತೆಗೆದುಕೊಳ್ಳಬಹುದು, ಮತ್ತು ಇದನ್ನು ಹಲ್ಲುಜ್ಜುವುದು ಒಂದು ವಾರದವರೆಗೆ ಬಳಸಬಹುದು

ಕನ್ನಡಾನುವಾದ: ಜೈಕುಮಾರ್ ಮರಿಯಪ್ಪ

 

 

19653 ನೊಂದಾಯಿತ ಬಳಕೆದಾರರು
7777 ಸಂಪನ್ಮೂಲಗಳು