ಜಲಜನಕ ಬಂಧಗಳು ಮತ್ತು ಅಡುಗೆ ಮನೆಯಲ್ಲಿ ಡೈಸ್ಸಲ್ಫೈಡ್ ಸೇತುವೆಗಳು.

Resource Info

ಮೂಲ ಮಾಹಿತಿ

ನಮ್ಮ ವಸ್ತು ಪ್ರಪಂಚವನ್ನು ರೂಪಿಸುವ ಈ ರಾಸಾಯನಿಕ ಕ್ರಿಯೆ -ಪ್ರತಿಕ್ರಿಯೆಗಳು ಯಾವುವು? ಈ ಕ್ರಿಯೆ -ಪ್ರತಿಕ್ರಿಯೆಗಳಲ್ಲಿ ಹೆಚ್ಚಿನವು ಬಲವಾಗಿದ್ದು ನಿರ್ದಿಷ್ಟವಾಗಿರುತ್ತವೆ., ಹಾಗೆಂದೇ ಅವುಗಳನ್ನು  ಬಂಧಗಳೆಂದು ಕರೆಯಲಾಗುತ್ತದೆ; ಬಂಧಿತವಲ್ಲದ ಕ್ರಿಯೆ -ಪ್ರತಿಕ್ರಿಯೆ ಗಳೆಂದು ಕರೆಯಲ್ಪಡುವ ಇತರ ಕ್ರಿಯೆಗಳೂ ಇವೆ. ಈ ಪರಸ್ಪರ ಕ್ರಿಯೆಗಳ ಬಗ್ಗೆ ನಾವು ಗಮನಹರಿಸೋಣ ಮತ್ತು ಹೇಗೆ ಶಕ್ತಿಗಳ ಒಂದು ಸಂಯೋಜನೆಯು ನೈಸರ್ಗಿಕ ಮತ್ತು ಮಾನವ ನಿರ್ಮಿತ ವಸ್ತುಗಳ ಗುಣಲಕ್ಷಣಗಳನ್ನು ವಿವರಿಸುತ್ತದೆ ಎಂಬುದನ್ನು ಪರಿಶೀಲಿಸೋಣ. ಇಲ್ಲಿ ಕೊಟ್ಟಿರುವ ವಿವರಣೆಯು ಬಹಳ ಸರಳವಾಗಿದೆ ಮತ್ತು ಯಾವುದೇ ಪ್ರೌಢಶಾಲೆ ಅಥವಾ ಕಾಲೇಜು ಪಠ್ಯವು ಹೆಚ್ಚಿನ ವಿವರಗಳನ್ನು ನೀಡುತ್ತದೆ.

ಕಾಲಾವಧಿ: 
00 hours 20 mins
ಚಟುವಟಿಕೆ ಹಂತಗಳು: 

ಜಲಜನಕ ಬಂಧಗಳು

ಸುಕ್ಕಾದ ಹತ್ತಿ ಬಟ್ಟೆಗಳನ್ನು ಇಸ್ತ್ರಿ ಮಾಡುವುದು ಎಷ್ಟುಕಷ್ಟ ನಮಗೆಲ್ಲರಿಗೂ ಗೊತ್ತು. ಗ್ಲುಕೋಸ್ನ ಪಾಲಿಮರ್ ಆದ ಸೆಲ್ಯುಲೋಸ್ನಿಂದ ಹತ್ತಿ ರೂಪುಗೊಂಡಿರುತ್ತದೆ. ಇದು ಎಳೆಗಳ ನಡುವೆ ಇರುವ ಜಲಜನಕದ ಬಂಧಗಳನ್ನು ರಚಿಸಿ ಅವನ್ನು ಜೊತೆಗೂಡಿ ಹಿಡಿದಿಟ್ಟುಕೊಳ್ಳುತ್ತದೆ. ಒಣಗಿರುವ  ಹತ್ತಿ ಬಟ್ಟೆಯ ಸುಕ್ಕನ್ನು  ಇಸ್ತ್ರಿಮಾಡಿ ತೆಗೆಯುವುದು  ತುಂಬಾ ಕಷ್ಟ ; ಆದರೆ ನೀರನ್ನು ಬಟ್ಟೆಯ ಮೇಲೆ ಚಿಮುಕಿಸಿದಾಗ, ಸುಕ್ಕಿನೊಳಗೆ ಇರುವ  ಜಲಜನಕ ಬಂಧಗಳು ಒಡೆದು, ಬದಲಿಗೆ ನೀರಿನೊಡನೆ ಪುನಃ ರಚನೆಯಾಗುತ್ತವೆ. ಇಸ್ತ್ರಿ ಮಾಡಿ  ನೀರಿನಂಶ ತೆಗೆಯಿರಿ ಸುಕ್ಕು ಮಾಯವಾಗುತ್ತದೆ . ಇದು ನಿಮ್ಮ ಕೂದಲಿಗೆ ನೀರು ಹಚ್ಚಿ ನಿಮ್ಮ ಕೂದಲನ್ನು ಗುಂಗುರು  ಅಥವಾ ನೇರವಾಗಿ ಮಾಡುವ ರೀತಿಯನ್ನು ಹೋಲುತ್ತದೆ, ಆದರೆ ಗಾಳಿಯಲ್ಲಿ ತೇವಾಂಶ ವಿರುವ ದಿನ ಅಥವಾ ತಲೆಗೆ ನೀರು ಸಿಂಪಡಿಸಿದರೆ ಈ ಶೈಲಿಬದಲಾಗಿ ಮತ್ತೆ ಮೊದಲಿನಂತಾಗುತ್ತದೆ.

ನಾವು ಒದ್ದೆಯಾದ ಹತ್ತಿ ಬಟ್ಟೆಯ ಸುಕ್ಕು ಗಳನ್ನು  ಇಸ್ತ್ರಿ ಮಾಡಿದಾಗ ಜಲಜನಕದ ಬಂಧಗಳು ರಚನೆಗೊಳ್ಳುತ್ತವೆ ಮತ್ತು ಮುರಿಯುತ್ತವೆ. ಆದರೆ ಗಮನಿಸಬೇಕಾದ ಮತ್ತೊಂದು ಸ್ಥಳವೆಂದರೆ ಚಪಾತಿಗಳಿಗೆ ಹಿಟ್ಟು ಕಲಸುವಾಗ. ಒಮ್ಮೆ ಅದು ಏನು ನಡೆಯುತ್ತಿದೆ ಎಂದು ನಾನು ಅರಿತುಕೊಂಡ ಮೇಲೆ, ನಾನು ಪ್ರತಿ ಬಾರಿಯೂ ಆಸಕ್ತಿಯಿಂದ ಅದನ್ನು ಗಮನಿಸುತ್ತಿದ್ದೇನೆ!

ಒಂದು ಪಾತ್ರೆಗಳಲ್ಲಿ ಹಿಟ್ಟು ತೆಗೆದುಕೊಂಡು ಅದರ ಉಷ್ಣತೆಯನ್ನು ತಿಳಿಯಲು ಅದರಲ್ಲಿ ನಿಮ್ಮ ಬೆರಳುಗಳನ್ನು ಆಡಿಸಿ. ನೀರನ್ನು ಸೇರಿಸಿ, ಅದನ್ನು ಮತ್ತೆ ನಿಮ್ಮ ಬೆರಳುಗಳ ಮೇಲಿನಿಂದ ಬೀಳಿಸಿ. ನೀವು ಹಿಟ್ಟು ಮತ್ತು ನೀರನ್ನು ಬೆರೆಸಿದಾಗ, ಮಿಶ್ರಣವು ಅರಿವಾಗುವಂತೆ ಬೆಚ್ಚಗಾಗುತ್ತದೆ. ಕಾರಣವೇನೆಂದರೆ ನೀರು ಪಿಷ್ಟದಲ್ಲಿ -OH ಗುಂಪುಗಳೊಂದಿಗೆ ಜಲಜನಕ ಬಂಧಗಳನ್ನು ರೂಪಿಸುತ್ತದೆ ಮತ್ತು ಶಕ್ತಿ ಬಿಡುಗಡೆ ಮಾಡಲಾಗುತ್ತದೆ.

ಮಿಶ್ರಣದ ತುಂಡು ತೆಗೆದುಕೊಂಡು ಅದನ್ನು ಹರಿಯುವ ನೀರಿನಲ್ಲಿ ಹಿಡಿದಿಟ್ಟುಕೊಳ್ಳಿ. ಅದು ತೊಳೆದು ಹೋಗುವುದು. ಹಿಟ್ಟನ್ನು ನಾದುವುದನ್ನು  ಮುಂದುವರಿಸಿ ಮತ್ತು ಹಿಟ್ಟು ಸ್ಥಿತಿಸ್ಥಾಪಕವಾಗುತ್ತದೆ. ಎರಡು ವಿಧದ ಪ್ರೋಟೀನ್ಗಳು - ಗ್ಲಿಯೆಡಿನ್ಗಳು ಮತ್ತು ಗ್ಲುಟೆನಿನ್ಗಳು ಒಟ್ಟಾಗಿ ಸೇರಿ ಗ್ಲುಟನ್ ರೂಪಿಸುತ್ತವೆ. ಇದು ನೀರಿನಲ್ಲಿ-ಕರಗದ ಪ್ರೋಟೀನ್ ವಸ್ತು .ಇದು ಡೈಸಲ್ಫೈಡ್ ಸೇತುವೆಗಳಿಂದ ಒಟ್ಟಿಗೆ ಇಡಲ್ಪಟ್ಟಿದೆ, ಹೆಚ್ಚಾಗಿ ನಾದುವ ಕ್ರಿಯೆ ಮತ್ತು ಗಾಳಿಯ ಸಂಯೋಜನೆಯಿಂದ ಹೀಗಾಗುತ್ತದೆ. ನೀವು ಈಗ ಹಿಟ್ಟಿನ ಒಂದು ಚೂರನ್ನು ತೆಗೆದುಕೊಂಡು ಅದನ್ನು ಹರಿಯುವ ನೀರಿನಲ್ಲಿ ತೊಳೆದರೆ, ಪಿಷ್ಟವು ತೊಳೆದು ಹೋಗಿ ಎಲಾಸ್ಟಿಕ್ ಗ್ಲುಟನ್ ಗಡ್ಡೆಯನ್ನು ಬಿಟ್ಟುಹೋಗುತ್ತದೆ.

ಪ್ರೋಟೀನ್ಗಳು ಮೂರು (ಅಥವಾ ನಾಲ್ಕು) ಪದರಗಳಲ್ಲಿ ಸಂಯೋಜಿಸಲ್ಪಟ್ಟಿರುವ ಸಂಕೀರ್ಣವಾದ ರಚನೆಗಳನ್ನು ಹೊಂದಿರುತ್ತವೆ. ಪ್ರೋಟೀನ್ನಿನ ಪ್ರಾಥಮಿಕ ರಚನೆ ಎಂದು ಕರೆಯಲ್ಪಡುವ ಮೊದಲನೆಯದು, ಕೋವೆಲೆಂಟ್ ಬಂಧಗಳಿಂದ ಕೂಡಿರುವ ಅಮೈನೊ ಆಮ್ಲಗಳ ಸರಣಿಯಾಗಿದೆ. ಈ ರೇಖೀಯ ಸರಪಳಿ ಹೆಲಿಕ್ಸ್ ಗಳುಮತ್ತು ಹಾಳೆಗಳ ವಿಭಾಗಗಳಾಗಿ ಜಲಜನಕ ಬಂಧಗಳಿಂದ ಕೂಡಿರುತ್ತದೆ ಇದನ್ನು ಅದರ ದ್ವಿತೀಯಕ ರಚನೆ ಎಂದು ಕರೆಯಲಾಗುತ್ತದೆ. ಅದರ ತೃತೀಯ ರಚನೆಯಲ್ಲಿ, ಪ್ರೋಟೀನ್ ಅಣುಗಳು ಬಂಧ ರಹಿತ ಪರಸ್ಪರ ಕ್ರಿಯೆಗಳು, ಅಯಾನಿಕ್ ಸಂವಹನಗಳನ್ನು ಮತ್ತು ಡೈಸಲ್ಫೈಡ್ ಸೇತುವೆ ) ಎಂಬ ವಿಶೇಷ ಕೋವೆಲೆಂಟ್ ಬಂಧವನ್ನು ಬಳಸಿಕೊಂಡು ವಿವಿಧ ಆಕಾರಗಳಾಗಿ ಮಡಚಿಕೊಳ್ಳುತ್ತವೆ, ಹಾಲಿನ ವಿಷಯಕ್ಕೆ ಬರೋಣ. ಹಾಲಿನ ಪ್ರೋಟೀನ್ಗಳು ದ್ರಾವಣವಾಗಿ ಹಿಡಿದಿಡಲ್ಪಡುತ್ತವೆ   ಮತ್ತು ಹಾಗೆ ಇಟ್ಟಾಗ ಕೆಳಗೆ ಇಳಿದು ನೆಲೆಗೊಳ್ಳುವುದಿಲ್ಲ. ಪನೀರ್ ಮಾಡಲು ಹಾಲು ಒಡೆಯುವಂತೆ ಮಾಡಿದಾಗ   ಅದರ ಪ್ರೋಟೀನ್ಗಳ ತೃತೀಯ ಮತ್ತು ದ್ವಿತೀಯ ರಚನೆಗಳನ್ನು ಮುರಿದು ಹಾಲು ಗಟ್ಟಿ ಮತ್ತು ನೀರು ಬೇರ್ಪಡುತ್ತದೆ.

ಇದು ನಿಂಬೆ ರಸ ಅಥವಾ ವಿನೆಗರ್ ಸೇರಿಸುವುದರಿಂದ ಅಯಾನಿಕ್ ಸಂವಹನ ಮತ್ತು ಪ್ರೋಟೀನ್ಗಳೊಳಗಿನ ಹೈಡ್ರೋಜನ್ ಬಂಧಗಳನ್ನು ಅಡ್ಡಿಪಡಿಸುತ್ತದೆ ಏಕೆಂದರೆ ಹಾಲಿನ ನೀರನ್ನು ಇನ್ನು ಮುಂದೆ ಅವು ಹಿಂದೆ ಮಾಡಿದ ರೀತಿಯಲ್ಲಿ ಸಂವಹನ ಮಾಡಲಾರವು. ನಾವು ಪನೀರ್ ಅನ್ನು ಸೇವಿಸಿದಾಗ, ನಮ್ಮ ಜೀರ್ಣಾಂಗದ ಕರುಳಿನ ಜೀರ್ಣಕಾರಿ ಕಿಣ್ವಗಳು ಒಟ್ಟಿಗೆ ಅಮೈನೋ ಆಮ್ಲಗಳ ಪ್ರಾಥಮಿಕ ರಚನೆಯನ್ನು ಒಟ್ಟಿಗೆ ಹಿಡಿದಿಟ್ಟಿರುವ ಕೋವೆಲೆಂಟ್ ಬಂಧಗಳನ್ನು ಒಡೆಯುತ್ತವೆ.

 

19218 ನೊಂದಾಯಿತ ಬಳಕೆದಾರರು
7452 ಸಂಪನ್ಮೂಲಗಳು