ಕಲಿಯಿರಿ ಲೆಕ್ಕದ ಭಾಷೆ

Resource Info

ಮೂಲ ಮಾಹಿತಿ

 ಣಿತವೆಂದರೆ   ಶಾಲೆಯ ಪಾಠಗಳಲ್ಲಿ ಅತಿ ಕಷ್ಟವಾದದ್ದು ಮತ್ತು ಮಕ್ಕಳಿಗೆ ಇಷ್ಟವೇಆಗದ ವಿಷಯವೆಂಬ ಭಾವನೆ ಇದೆ. ಬಹಳಷ್ಟು ಮಕ್ಕಳು ಇದು ಬಹಳ ಬೋರು ಹೊಡೆಸುವ  ವಿಷಯ ಮತ್ತು ಬದುಕಿಗೆ ಏನೇನೂ ಸಂಬಂಧಪಡದಂತದ್ದು ಎಂದು ತಿಳಿದುಕೊಂಡಿರುತ್ತಾರೆ.ಹೀಗಿದ್ದರೂ, ಸ್ವಲ್ಪ ತಾಳ್ಮೆ ವಹಿಸಿದರೆ ಮತ್ತು ಗಣಿತದ  ಸುತ್ತಲಿನ ತತ್ವಗಳನ್ನು ಅರಿತುಕೊಂಡರೆ ಮಕ್ಕಳಿಗೆ ಗಣಿತವು ಪ್ರಿಯ ವಿಷಯವಾಗಬಲ್ಲದು.  

 

 

ಕಾಲಾವಧಿ: 
(ಇಡೀ ದಿನ)
ಪೀಠಿಕೆ: 

`ಘಟಕ ಅಧ್ಯಯನದ ಭಾಗವಾಗಿ ಮತ್ತು ದೈನಂದಿನ ಜೀವನದ ಭಾಗವಾಗಿ ಗಣಿತವನ್ನು ವಿನೋದವನ್ನು ಹಾಗು ಪರಸ್ಪರ ಒಡನಾಟದ ಕಲಿಕೆಯ ಸಾಧನಗಳನ್ನು ಬಳಸಿಕೊಂಡು ಚೆನ್ನಾಗಿ  ಕಲಿಸ ಬಹುದಾಗಿದೆ. ಸೂಕ್ತ ವಸ್ತುಗಳು ಹಾಗು ಚಟುವಟಿಕೆಗಳನ್ನು ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ಗಣಿತ ಕಲಿಯುತ್ತಾರೆ ಮತ್ತು ಆನಂದಿಸುತ್ತಾರೆ.. ಗಣಿತವನ್ನು  ಕಲಿಯಲು ಅತ್ಯುತ್ತಮ ಆಟಗಳೆಂದರೆ ಚಟುವಟಿಕೆಯ ಹಿಂದಿನ  ಗಣಿತದ ಸೂತ್ರಗಳನ್ನು ಪತ್ತೆಹಚ್ಚಲು ಮಕ್ಕಳು ಒಟ್ಟಿಗೆ ಕೆಲಸ ಒಳಗೊಂಡಿರುವ ಚಟುವಟಿಕೆಗಳು. ಪರಿಕಲ್ಪನೆಯ ರೂಪದಲ್ಲಿ  ಪೂರ್ಣವಾಗಿ ಇರದ ಗಣಿತ ವನ್ನು ಪರಿಚಯಿಸುವಾಗ ಅದರ ವಿಚಾರಗಳನ್ನು ಕುರಿತು ಮಾತನಾಡುವ ಮತ್ತು ಕಲ್ಪನೆಗಳನ್ನು ಚರ್ಚಿಸುವ ವಿಧಾನವನ್ನು ಬಳಸಿದರೆ ತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಮೂರ್ತ ಚಟುವಟಿಕೆಗಳಿಂದ ಹೆಚ್ಚು ಅಮೂರ್ತ ತತ್ವಗಳನ್ನು ಸುಗಮವಾಗಿ ಅರಿಯುವುದು ಸಾಧ್ಯವಾಗುತ್ತದೆ.

ಉದ್ದೇಶ: 

1.ವಿದ್ಯಾರ್ಥಿಗಳು ಗಣಿತ ಬಗ್ಗೆ ಮಾತನಾಡಲು ಪ್ರೋತ್ಸಾಹಿಸುವುದು ಮತ್ತು ಗಣಿತ ಚರ್ಚೆಯನ್ನು ಪ್ರೋತ್ಸಾಹಿಸುವುದು.

2. ವಿದ್ಯಾರ್ಥಿಗಳು ಜೋಡಿಳಾಗಿ ಮತ್ತು ಗುಂಪುಗಳಲ್ಲಿ ಮೂಲ ಗಣಿತದ ಕೌಶಲಗಳನ್ನು ಕಲಿತುಕೊಳ್ಳುವುದಕ್ಕೆ ಸಹಾಯ

.3. ವಿದ್ಯಾರ್ಥಿಗಳು, ಆಲೋಚಿಸುವ ಮೂಲಕ ಮತ್ತು ವಿಚಾರ ಹಂಚಿಕೊಳ್ಳುವ ಮೂಲಕ ಮತ್ತು ಚರ್ಚೆಯ ಮೂಲಕ ಪರಿಕಲ್ಪನೆಗಳು ಏನೆಂಬುದನ್ನು ಅರಿತುಕೊಳ್ಳಲು ಅವಕಾಶ ಕಲ್ಪಿಸುವುದು.

4. ತಮ್ಮದೇಪ್ರಯತ್ನದಿಂದ ವಿದ್ಯಾರ್ಥಿಗಳು ಮೂಲಭೂತ ಗಣಿತದ ಮೇಲೆ ಹಿಡಿತ ಸಾಧಿಸಲು ಸಹಾಯ ಮಾಡುವುದು.

5. ಗಣಿತವು ಒಬ್ಬನದೇ ದಣಿವಿನ ಕೆಲಸವಾಗುವ ಬದಲಿಗೆ ಹೆಚ್ಚು ಆಸಕ್ತಿದಾಯಕ ಮತ್ತು ವಿನೋದದ ಗುಂಪು ಚಟುವಟಿಕೆ ಆಗುವಂತೆ ಮಾಡಲು.

 

 

ಚಟುವಟಿಕೆ ಹಂತಗಳು: 

ಕಾಣುವ ಗಣಿತ

ಮಾತಿನಲ್ಲೇ ಲೆಕ್ಕಾಚಾರ

ಪಾಠಾವಧಿಗೆ ಬೇಕಾಗುವ ಸಮಯ: 20 ನಿಮಿಷಗಳು

ಹಂತಗಳು

ಹಂತ1:

  1. ತರಗತಿಯನ್ನು ಇಬ್ಬಿಬ್ಬರ ಜೋಡಿಯಾಗಿ ವಿಂಗಡಿಸಿ.

2.ಕಾರ್ಯಪತ್ರದ ಪ್ರತಿಯನ್ನು ಪ್ರತಿಜೋಡಿಗೂ ಹಂಚಿರಿ .ವಿದ್ಯಾರ್ಥಿಗಳಿಗೆ ಜೊತೆಜೊತೆಯಾಗಿ ಕೆಲಸಮಾಡಿ ಕಾರ್ಯಪತ್ರದಲ್ಲಿರುವ ಆಕಾರಗಳಿಗೆ ಮೊದಲಿಗೆ ಬಣ್ಣಹಾಕಲು ತಿಳಿಸಿರಿ.ಯಾವ ಬಣ್ಣವನ್ನು ಹಾಕಬೇಕೆಂಬುದನ್ನು ಮತ್ತು ಬಣ್ಣದ ಸಂಯೋಜನೆಯನ್ನು ಅವರು ನಿರ್ಧರಿಸಬಹುದು. ಪ್ರತಿಯೊಂದು ಆಕಾರಕ್ಕೂ ಒಂದೇ ಬಣ್ಣವನ್ನು ಬಳಿಯಬೇಕೇ (ಎಲ್ಲವೃತ್ತಗಳಿಗೂ ಹಳದಿ ಬಣ್ಣ,ಎಲ್ಲ ಚೌಕಗಳಿಗೂ ಕೆಂಪು ಬಣ್ಣ ಹೀಗೆ)ಆಥವಾ  ಪ್ರತಿಯೊಂದು ಬಾಕ್ಸಿಗೂ ಒಂದೊಂದು ಬಣ್ಣ ಹೀಗೆ ಮಾಡಬೇಕೇ ಎಂಬುದನ್ನು ಅವರು ನಿರ್ಧರಿಸಲಿ. ಇದು ಅವರಲ್ಲಿ ಹುರುಪು ತುಂಬಲು ಸಹಕಾರಿ ಮತ್ತು ಜೊತೆಗಾರರು ಮಾತನಾಡುತ್ತಾ ಆಸಕ್ತಿ ಬೆಳಸಿಕೊಳ್ಳುತ್ತಾರೆ..

 ಮುಂದೆ ಮಕ್ಕಳು ಉತ್ತರಗಳನ್ನು ಕಂಡುಹಿಡಿಯಲಿ

 

ಪಾಠಾವಧಿ 2:

ಪಾಠಾವಧಿಗೆ ಬೇಕಾಗುವ ಸಮಯ: 20 ನಿಮಿಷಗಳು

ಹಂತಗಳು

ಹಂತ 1:

  1. ವಿದ್ಯಾರ್ಥಿಗಳನ್ನು ಪ್ರತಿಯೊಂದರಲ್ಲೂ 4 ಜನ ವಿದ್ಯಾರ್ಥಿ ಇರುವ ಗುಂಪುಗಳಾಗಿ ವಿಂಗಡಿಸಿ.ಪ್ರತಿ ಗುಂಪಿಗೂ ಮಣೆ ಆಟಗಳು ಅಥವಾ ಕಾರ್ಡು ಆಟಗಳನ್ನು ನೀಡಿರಿ ( ಹಾವು- ಏಣಿ ಆಟ,ಲುಡೊ,ಚೈನಿಸ್ ಚೆಕ್ಕರ್,ಉನೋ ಇತ್ಯಾದಿ.) ಈ ಎಲ್ಲ ಆಟಗಳಲ್ಲೂ ಎಣಿಸುವುದು ಮತ್ತು ಲೆಕ್ಕ ಮಾಡುವುದು  ಇದ್ದೇ  ಇರುತ್ತದೆ.ಆದ್ದರಿಂದ ಇವು  ಮೂಲಭೂತ ಗಣಿತದ ಕೌಶಲಗಳನ್ನು ಕಲಿಸಲು ಉತ್ತಮ ಸಾಧನಗಳಾಗುತ್ತವೆ.ಇವುಗಳ ಬಗ್ಗೆ ವ್ಯಯ ಮಾಡಿದ ಸಮಯವು ವ್ಯರ್ಥವಾಗುವುದಿಲ್ಲ.ಏಕೆಂದರೆ ಮಕ್ಕಳು ಸಂಖ್ಯೆಗಳ ಬಹು ಸಂವೇದನಾ ಸ್ಪರ್ಶವನ್ನು ಹೊಂದುತ್ತಾರೆ
  2. .
  3. ಮಕ್ಕಳು "ದಾಳ  ಉರುಳಿಸಿ ಮತ್ತು ಸಂಖ್ಯೆ ಬರೆಯಿರಿ" ಆಟವನ್ನು ಆಡಬಹುದು.ಇದರಲ್ಲಿ ಮಕ್ಕಳು ಡೈಸ್ ದಾಳವನ್ನು ಉರುಳಿಸಿ ಅದರಲ್ಲಿನ ಚುಕ್ಕೆಗಳನ್ನು ಎಣಿಸಬೇಕು ಮತ್ತು ಸಂಖ್ಯೆಯನ್ನು ಬರೆಯಬೇಕು ಮತ್ತೆ ದಾಳವನ್ನು ಉರುಳಿಸಿ ಈಕೆಳಗೆ ಕೊಟ್ಟಿರುವಂತಹ ಲೆಕ್ಕ ಮಾಡಲಿ
     

________+_________=_________

________+_________=_________

________+_________=_________

________+_________=_________

________+_________=_________

ಹಂತ2:

 

  1. ಇದು ಮಕ್ಕಳ ಬದುಕಿನಲ್ಲಿ ಗಣಿತವನ್ನು ತರಲು ಉದ್ದೇಶಿಸಿದ ಮುಕ್ತವಾದ ಪರಸ್ಪರ ಕೊಳ್ಕೊಡೆ ಪಾಠಾವಧಿ ಆಗಿರುತ್ತದೆ.
  2. ವಾಡಿಕೆಯ ಮನೆ ಅಭ್ಯಾಸಗಳನ್ನು ಕೊಡುವ ಬದಲಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಅವರ ತಂದೆ ತಾಯಿಯರ ಜೊತೆಗೆ  ಹೋಗಿ ಅಂಗಡಿ ವ್ಯಾಪಾರವನ್ನು ಮಾಡುವ ಕೆಲಸವನ್ನು ಕೊಡಬಹುದು. ಮಕ್ಕಳು ತಂದೆ ತಾಯಿಯರು ವ್ಯಾಪಾರ ಮಾಡುವಾಗ ಸಹಾಯ ಮಾಡಬಹುದು ಹಾಗೆಯೆ ಲೆಕ್ಕಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬಹುದು.ಅವರು ಮಾರಾಟಕ್ಕೆ ಇರುವ ವಸ್ತುಗಳ ಪಟ್ಟಿ ಮಾಡಬೇಕು.ರಿಯಾಯತಿದರವನ್ನು ಗುರುತು ಹಾಕಿಕೊಂಡು ಅಸಲು ಬೆಲೆಯನ್ನು ಹೋಲಿಸಿನೋಡಿ ವ್ಯತ್ಯಾಸವನ್ನು ಲೆಕ್ಕಮಾಡಬೇಕು.ಆಗ ಅವರಿಗೆ ಪ್ರತಿಬಾಬಿನಲ್ಲೂ ಎಷ್ಟು ಉಳಿತಾಯ ಆಗಿದೆ ಎಂಬುದು ಗೊತ್ತಾಗುತ್ತದೆ ಇದನ್ನು ಟ್ಟು ಉಳಿತಾಯದಲ್ಲಿ ಸೇರಿಸಬೇಕು. ಇಂಥ ಕಾರ್ಯಗಳನ್ನು ಮಕ್ಕಳಿಗೆ ವಹಿಸಿದಾಗ "ಬೋರುಹೊಡಿಸುವ ಗಣಿತದ ಪರಿಕಲ್ಪನೆಯ ಬದಲಾಗಿ" ಅವರಿಗೆ ಕೈಯ್ಯಾರೆ ಕೆಲಸಮಾಡಿದ ಅನುಭವ ದೊರಕುತ್ತದೆ.
  3.  ರಸ್ತೆಯಲ್ಲಿ ಎಲ್ಲೆಲ್ಲಿ ಸಂಖ್ಯೆಗಳಿವೆ ಚಿನ್ಹೆಗಳಿವೆ ಎಂಬುದನ್ನು ಹುಡುಕಿ ನೋಡಲು ಹೇಳಿರಿ..ಒಂದು ನಿರ್ದಿಷ್ಟ ಬ್ರಾಂಡಿನ ಕಾರುಗಳು ಒಂದು ನಿರ್ದಿಷ್ಟ ರಸ್ತೆಯಲ್ಲಿ ಹೋದವುಎಂಬುದನ್ನು ಅಥವಾ 2 ಅಥವಾ 3 ಅಂತಸ್ತಿನ ಕಟ್ಟಡಗಳು ಆಥವಾ ಅವರ ಮನಸ್ಸಿಗೆ ಬಂದ ಯಾವುದೇ ವಸ್ತುವನ್ನುಎಣಿಸಲು ಹೇಳಿರಿ. ನೋಡಲಿಕ್ಕೆ ತುಂಬಾ ಸುಲಭವಾದ   ಅಭ್ಯಾಸವು ಮಕ್ಕಳಲ್ಲಿ ಎಣಿಸುವುದು ಗುಂಪು ಮಾಡುವುದು ಮತ್ತು ವಿಂಗಡಣೆ ಮಾಡುವುದು ಮುಂತಾದ ಚಟುವಟಿಕೆಗಳಲ್ಲಿ ಆಸಕ್ತಿ ಬರಿಸುತ್ತದೆ.

 

 

 

 

ಈ ಲೇಖನವು ಮೊದಲು ಟೀಚರ್ ಪ್ಲಸ್ ಸಂಚಿಕೆ 57 ನವೆಂಬರ್-ಡಿಸೆಂಬರ್  1998ರಲ್ಲಿ   ಪ್ರಕಟವಾಗಿದೆ ಮತ್ತು ಅದನ್ನು ಇಲ್ಲಿ ಕೆಲವೊಂದು ಬದಲಾವಣೆಗಳನ್ನು ಅಳವಡಿಸಿ ಕನ್ನಡಕ್ಕೆ ಅನುವಾದಿಸಿ ಕೊಡಲಾಗಿದೆ. 

ಕನ್ನಡ ಅನುವಾದ : ಜೈಕುಮಾರ್ ಮರಿಯಪ್ಪ.

 

 

 

18461 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು