ಕನ್ನಡಿಗಳೊಂದಿಗೆ ಸ್ವಲ್ಪ ಸಮಯ

Resource Info

ಮೂಲ ಮಾಹಿತಿ

ಕನ್ನಡಿ : ಪ್ರತಿಫಲನದಿಂದ ವಸ್ತುಗಳ ಪ್ರತಿಬಿಂಬವನ್ನು ಉಂಟುಮಾಡುವ ಉಪಕರಣ (ಮಿರರ್). ಸಾಮಾನ್ಯವಾಗಿ ಬೆಳಕನ್ನು ಪ್ರತಿಫಲಿಸುವ ಉಪಕರಣವನ್ನು ಕನ್ನಡಿ ಎಂದರೂ ಶಬ್ದ ರೇಡಿಯೋ ತರಂಗ ಮುಂತಾದುವನ್ನು ಪ್ರತಿಫಲಿಸುವ ಕನ್ನಡಿಗಳೂ ಇವೆ. ವಸ್ತುಗಳು ನಮಗೆ ಕಾಣಿಸಬೇಕಾದರೆ ಬೆಳಕು ಅಗತ್ಯ. ಸ್ವಪ್ರಕಾಶವಿರುವ ವಸ್ತುವಿನ ಬೆಳಕು ನಮ್ಮ ಕಣ್ಣನ್ನು ಪ್ರವೇಶಿಸುವುದರಿಂದ ಆ ವಸ್ತು ನಮಗೆ ಕಾಣಿಸುತ್ತದೆ. ಉದಾಹರಣೆಗೆ ದೀಪ. ಆದರೆ ಪ್ರಕಾಶರಹಿತವಾದ ವಸ್ತು ನಮಗೆ ಕಾಣಿಸುವುದು. ಅದರ ಮೇಲೆ ಬಿದ್ದು, ಅದರಿಂದ ಚದುರಿಸಲ್ಪಟ್ಟ ಬೆಳಕು ನಮ್ಮ ಕಣ್ಣನ್ನು ಪ್ರವೇಶಿಸುವುದರಿಂದ. ಉದಾಹರಣೆಗೆ ಈ ಪುಟ. ಇದು ಬೆಳಕನ್ನು ಚದುರಿಸುತ್ತದೆಯಾದರೂ ಇದನ್ನು ಕನ್ನಡಿ ಎನ್ನುವುದಿಲ್ಲ. ಆದರೆ ಬೆಳಕನ್ನು ಕ್ರಮವಾಗಿ ಪ್ರತಿಫಲಿಸುವಂಥ, ಮೇಲ್ಮೈಗೆ ಹೊಳಪು ಕೊಟ್ಟಿರುವ ಲೋಹ ಫಲಕ ಅಥವಾ ಹಿಂಭಾಗದಲ್ಲಿ ಲೋಹದ ತೆಳುಲೇಪನ ಇರುವ ನಯವಾದ ಗಾಜನ್ನು ಕನ್ನಡಿ ಎನ್ನುತ್ತೇವೆ.

https://kn.wikipedia.org/wiki/%E0%B2%95%E0%B2%A8%E0%B3%8D%E0%B2%A8%E0%B2...

ಕಾಲಾವಧಿ: 
(ಇಡೀ ದಿನ)
ಪೀಠಿಕೆ: 

ಕನ್ನಡಿಯು ಕಿರಣದೂರವನ್ನು (ಆಪ್ಟಿಕಲ್ ಪಾತ್) ಮಡಚುವಂತೆ ಮಾಡುವುದರಿಂದ ಬೆಳಕಿನ ಉಪಕರಣಗಳ ಉದ್ದ ಕಡಿಮೆ ಮಾಡಲು ಕನ್ನಡಿ ಯನ್ನು ಉಪಯೋಗಿಸು ತ್ತಾರೆ. ದಾರಿಯ ತಿರುವು ಗಳಲ್ಲಿ ಕನ್ನಡಿಯಿಟ್ಟು ನಾವು ತಿರುಗುವ ಮೊದಲೇ ತಿರುವಿನ ಆ ಕಡೆಯಿಂದ ಬರುತ್ತಿರುವ ವಾಹನಗಳು ನಮಗೆ ಕಾಣಿಸುವಂತೆ ಮಾಡುತ್ತಾರೆ. ಜಲಾಂತರ್ಗಾಮಿ ನೀರಿನಲ್ಲಿ ಮುಳುಗಿರುವಾಗ ನೀರಿನ ಮೇಲಿರುವ ಹದಗುಗಳನ್ನೊ ವಸ್ತುಗಳನ್ನೋ ನೋಡಲು ಮತ್ತು ಕಂದಕದಲ್ಲಿ ಅಡಗಿ ಮೇಲೆ ವೈರಿಗಳ ಚಲನವಲನ ಗಳನ್ನು ನೋಡಲು ಉಪ ಯೋಗಿಸುವ ಪರಿಸ್ಕೋಪುಗಳಲ್ಲಿ ಉದ್ದವಾದ ಕೊಳವೆಯಲ್ಲಿ ಎರಡು ಕನ್ನಡಿಗಳನ್ನು ಊರ್ಧ್ವ ದಿಕ್ಕಿಗೆ 45º ಕೋನ ಉಂಟುಮಾಡಿ ಪರಸ್ಪರ ಸಮಾನಾಂತರವಾಗಿರುವಂತೆ ಇಟ್ಟಿರುತ್ತಾರೆ. ಆಗ ಮೇಲಿರುವ ವಸ್ತುಗಳಿಂದ ಹೊರಟ ಬೆಳಕಿನ ಕಿರಣಗಳು ಎರಡು ಕನ್ನಡಿಗಳಲ್ಲೂ ಪ್ರತಿಫಲನಗೊಂಡು ಕೆಳಗೆ ಇರುವವರ ಕಣ್ಣನ್ನು ಪ್ರವೇಶಿಸುವುದರಿಂದ ಅವರಿಗೆ ಕಾಣಿಸುತ್ತದೆ.

ಉದ್ದೇಶ: 

ಅಂತರ ವಿದ್ಯಾವಿಷಯ ಅಧ್ಯಯನ ವಾಗಿ ಕನ್ನಡಿ ಮತ್ತು ಪ್ರತಿಫಲನವನ್ನು ಅಭ್ಯಾಸ ಮಾಡುವುದು

ಚಟುವಟಿಕೆ ಹಂತಗಳು: 
ಮಕ್ಕಳೆಲ್ಲರ ಆಕರ್ಷಣೆಯ ಬಿಂದುವಾದ ಕನ್ನಡಿಗಳತ್ತ ನಾವು ಈಗ ಗಮನ ಹರಿಸೋಣ. ಅವರು ದೊಡ್ಡವರಾದ ಮೇಲಂತೂ ಅದನ್ನು ಸರ್ವೆಸಾಮಾನ್ಯ ಎಂದು ಪರಿಗಣಿಸುವವರೆಗೂ ಇದು ಖಂಡಿತ ನಿಜ! ನಮಗೆಲ್ಲರಿಗೂ ತಿಳಿದಿರುವಂತೆ ಒಬ್ಬ ವ್ಯಕ್ತಿ ಕನ್ನಡಿಯ ಎದುರು ನಿಂತಾಗ ಆತನ ಎಡಗೈ ನಮ್ಮ ಬಲಗೈನಂತೆ ಕಾಣುತ್ತದೆ. ನಾವು ಇದಕ್ಕೆ ’ಪಾರ್ಶ್ವ ವಿಲೋಮನ’  (Lateral Inversion)ಎಂದು ಹೆಸರಿಟ್ಟಿರುವುದು ನಿಜಕ್ಕೂ ದುರದೃಷ್ಟಕರ. ಏಕೆಂದರೆ ಕನ್ನಡಿಯಲ್ಲಿ ವ್ಯಕ್ತಿಯು ನೋಡುತ್ತಿರುವ ದಿಕ್ಕು ಮಾತ್ರ ಬದಲಾಗುತ್ತದೆ  ಅಷ್ಟೇ! ಉಳಿದ ಎರಡು ದಿಕ್ಕುಗಳು ಹಾಗೆಯೇ ಇರುತ್ತದೆ. ಉದಾಹರಣೆಗೆ, ನಮ್ಮ ಮೇಲಿನ ಮತ್ತು ಕೆಳಗಿನ ಭಾಗ ಬದಲಾಗುವುದಿಲ್ಲ. ಒಬ್ಬ ವ್ಯಕ್ತಿಯ ದೃಷ್ಟಿಕೋನದಿಂದ ಅಥವಾ ಅವನು ನೋಡುತ್ತಿರುವ ದಿಕ್ಕಿನಿಂದ ಮಾತ್ರ ಭಾಷಾ ಪ್ರಯೋಗದ ಮೂಲಕ ಎಡ ಮತ್ತು ಬಲವನ್ನು ಹೇಳಬಹುದು ಆದರೆ ಮೇಲೆ ಮತ್ತು ಕೆಳಗೆ ಎನ್ನುವುದನ್ನು ನಾವು ಭೂಮಿಗೆ ಹೋಲಿಸಿ ಹೇಳುತ್ತೇವೆ. ಇದು ಕೇವಲ ಭಾಷಾಪ್ರಯೋಗದ ವಿಷಯವಷ್ಟೇ ಅಲ್ಲ, ಸಾವು-ಬದುಕಿನ ಪ್ರಶ್ನೆಯೂ ಆಗಿದೆ.  ರೋಗಿಯ ಶಸ್ತ್ರಚಿಕಿತ್ಸೆ ಮಾಡುತ್ತಿರುವ ವೈದ್ಯನೊಬ್ಬನು ಎಡ-ಎಂದು ಹೇಳುವಾಗ ಆತ ತನ್ನ ಎಡಭಾಗ ಎನ್ನುತ್ತಿದ್ದಾನೋ ಅಥವಾ ರೋಗಿಯ ಎಡಭಾಗ ಎನ್ನುತ್ತಿದ್ದಾನೋ ಎಂಬುದನ್ನು ಸ್ಪಷ್ಟಪಡಿಸಬೇಕಲ್ಲವೇ?!
 
 
 
ಚಿತ್ರ 1. ಒಂದಕ್ಕೊಂದು ೯೦ಡಿಗ್ರಿ ಕೋನದಲ್ಲಿರುವ ಎರಡು ಕನ್ನಡಿಗಳ ಪ್ರತಿಫಲನ. ಕನ್ನಡಿಯ ಎದುರು ನಿಂತಿರುವ ವ್ಯಕ್ತಿ ತನ್ನ ಬಲಗೈಯನ್ನು ಬಿ ನಿಂದ ಎ ನತ್ತ ಚಲಿಸಿದರೆ, ಪ್ರತಿಫಲನದಲ್ಲಿರುವ ಕೈ ವಿರುದ್ಧ ದಿಕ್ಕು ಅಂದರೆ ಸಿ ನಿಂದ ಡಿ ನತ್ತ ಚಲಿಸುತ್ತದೆ. ಅಂದರೆ ಇಲ್ಲಿಯೂ ಸಹ ಬಲಗೈ ಚಲಿಸಿದಂತೆಯೇ ಕಾಣುತ್ತದೆ. ಆದರೆ, ಒಂದೇ ಕನ್ನಡಿಯಿದ್ದಾಗ, ಚಿತ್ರದಲ್ಲಿ ಅದೇ ದಿಕ್ಕಿನಲ್ಲಿ ಎಡಗೈ ಚಲಿಸಿದಂತೆ ಕಾಣುತ್ತದೆ. 
ಮತ್ತೊಬ್ಬರಿಗೆ ನಾವು ಕಂಡಂತೆ ಕನ್ನಡಿಯಲ್ಲಿ ನಮಗೆ ಕಾಣಲು ಸಾಧ್ಯವಿಲ್ಲ ಎನ್ನುವುದು ಸತ್ಯ. ಸೀರೆಯನ್ನುಟ್ಟುಕೊಂಡ ಒಬ್ಬ ಮಹಿಳೆ ಅಥವಾ ಒಂದು ಕಡೆ ಜೀಬಿರುವ ಶರ್ಟ್ ತೊಟ್ಟಿರುವ ವ್ಯಕ್ತಿಯ ವಿಷಯಗಳಲ್ಲಂತೂ ಇದು ಖಚಿತ. ಇನ್ನೊಬ್ಬರಿಗೆ ನಾವು ಕಾಣುವಂತೆ ನಮಗೆ ನಾವು ಕಾಣಬೇಕಾದರೆ ಎರಡು ಕನ್ನಡಿಗಳನ್ನು ೯೦ ಡಿಗ್ರಿಯಲ್ಲಿ ಇರಿಸಬೇಕಾಗುತ್ತದೆ. ಹಿಂದೆಂದೂ ಇಂತಹ ರಚನೆಯನ್ನು ನೀವು ನೋಡಿರದಿದ್ದರೆ ನಿಜಕ್ಕೂ ಆಶ್ಚರ್ಯಚಕಿತರಾಗುತ್ತೀರಿ. ನೀವು ನಿಮ್ಮ ಬಲಗೈಯನ್ನು ನಿಮ್ಮಿಂದ ದೂರ ಸರಿಸಿದರೆ, ಆ ಬಿಂಬವೂ ಸಹ ತನ್ನಿಂದ ಬಲಗೈಯನ್ನು ದೂರ ಸರಿಸುತ್ತದೆ! ಇದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಚಿತ್ರ 1ನ್ನು ನೋಡಿ. 
 
ಒಂದಕ್ಕೊಂದು ೯೦ ಡಿಗ್ರಿ ಅಂತರದಲ್ಲಿ ಇರಿಸಿರುವ ಮೂರು ಕನ್ನಡಿಗಳನ್ನು ವ್ಯಕ್ತಿಯೊಬ್ಬ ನೋಡಿದಾಗ ಹೆಚ್ಚು ಆಶ್ಚರ್ಯಕರ ಅನುಭವವಾಗುತ್ತದೆ. ಇದರ ಜ್ಯಾಮಿತಿಯು ಒಂದು ಕೋಣೆಯ ಮೂಲೆಯಲ್ಲಿ ಎರಡು ಗೋಡೆಗಳು ನೆಲವನ್ನು ಸೇರುವಂತಿರುತ್ತದೆ. ಆದ್ದರಿಂದ ಇದನ್ನು ’ಮೂಲೆಯ ಪ್ರತಿಫಲಕ’ ಎನ್ನುತ್ತಾರೆ. ಯಾವುದೇ ಬೆಳಕಿನ ಕಿರಣ ಯಾವುದೇ ಮೂಲೆಯಿಂದ ಈ ಮೂಲೆಯ ಪ್ರತಿಫಲಕದ ಮೇಲೆ ಬಿದ್ದಾಗ ಅದೇ ದಿಕ್ಕಿನಲ್ಲಿ ಪ್ರತಿಫಲನವಾಗುತ್ತದೆ. (ಚಿತ್ರ 2ಎ). ಇಂತಹ ರಚನೆಯನ್ನು ನೋಡಿದಾಗ ವ್ಯಕ್ತಿಗೆ ಏನು ಕಾಣುತ್ತದೆ? ಯಾರು ಎಲ್ಲಿಗೆ ಹೋದರೂ, ಪ್ರತಿಯೊಂದು ಮೂಲೆಯಲ್ಲೂ ತನ್ನ ಕಣ್ಣನ್ನು ತಾನೇ ನೋಡುತ್ತಾನೆ!
 
 
ಚಿತ್ರ 2ಎ. ಮೂರು ಕನ್ನಡಿಗಳು ಮೂಲೆಯೊಂದರಲ್ಲಿ ಸೇರಿರುವ ಮಾದರಿ. ಯಾವುದೇ ದಿಕ್ಕಿನಿಂದ ಬೆಳಕು ಬಂದರೂ ಅದೇ ದಿಕ್ಕಿನಲ್ಲೇ ಪ್ರತಿಫಲನವಾಗುತ್ತದೆ.
ಇದು ಕೇವಲ ಕುತೂಹಲ ಹುಟ್ಟಿಸುವ ಯುಕ್ತಿಯಷ್ಟೇ ಅಲ್ಲ, ಪ್ರಯೋಜನಕಾರಿಯೂ ಆಗಿದೆ. ಹೆದ್ದಾರಿಗಳಲ್ಲಿರುವ ಅಪಾಯಕಾರಿ ತಿರುವುಗಳಲ್ಲಿ ಈ ರೀತಿಯ ಪ್ರತಿಫಲಕಗಳನ್ನು ಉಪಯೋಗಿಸುತ್ತಾರೆ. ರಾತ್ರಿಗಳಲ್ಲಿ ವಾಹನದ ತಲೆದೀಪಗಳ ಬೆಳಕು ಈ ಪ್ರತಿಫಲಕಗಳ ಮೇಲೆ ಬಿದ್ದಾಗ ಅವು ಬೆಳಕನ್ನು ವಾಹನ ಸವಾರನಿಗೆ ಪ್ರತಿಫಲಿಸಿ ಎಚ್ಚರಿಕೆಯನ್ನು ಕೊಡುತ್ತವೆ. ಇದೊಂದು ಸಮರ್ಥವಾದ ವ್ಯವಸ್ಥೆ. ಇದಕ್ಕೆ ವಿದ್ಯುತ್ತಿನ ಅವಶ್ಯಕತೆಯಿಲ್ಲ ಮತ್ತು ಎಲ್ಲಿ ಬೆಳಕು ಅವಶ್ಯವಿದೆಯೋ ಅಲ್ಲಿಗೇ ಕಳಿಸುತ್ತದೆ. ಈ ಪ್ರತಿಫಲಕಗಳ ಮತ್ತೊಂದು ಉದಾಹರಣೆಯನ್ನು ಚಿತ್ರ 2ಬಿ ನಲ್ಲಿ ತೋರಿಸಲಾಗಿದೆ. 
 
 
ಚಿತ್ರ 2ಬಿ. ಅಪೋಲೋ ೧೫ರ ಗಗನಯಾತ್ರಿಗಳು ಮೂಲೆ ಪ್ರತಿಫಲಕಗಳನ್ನು ಚಂದ್ರನಲ್ಲಿ ನೆಟ್ಟರು. ಇದರಿಂದ ಚಂದ್ರನ ನಿರ್ದಿಷ್ಟ ದೂರ ಮತ್ತು ಸಮಯಕ್ಕೆ ತಕ್ಕಂತೆ ಅದರಲ್ಲಾಗುವ ಬದಲಾವಣೆ ತಿಳಿಯಿತು. ಕೃಪೆ: ನಾಸಾ, ಯುಎಸ್‌ಎ
ಇದೊಂದು ನಾಟಕೀಯ ಪ್ರಸಂಗ. ಅಮೇರಿಕಾದ ಗಗನಯಾತ್ರಿಗಳು ಅಪೋಲೋ ಮಿಷನ್‌ನಲ್ಲಿ ಈ ಪ್ರತಿಫಲಕಗಳನ್ನು ಚಂದ್ರನ ಮೇಲೆ ನೆಟ್ಟರು. ಇದನ್ನು ಉಪಯೋಗಿಸಿ ವಿಜ್ಞಾನಿಗಳು ಭೂಮಿಯ ಮೇಲೆ ಟೆಲಿಸ್ಕೋಪ್ ಸಹಾಯದಿಂದ ಲೇಸರ್ ಬೆಳಕಿನ ಕಿರಣಗಳನ್ನು ಕಳುಹಿಸಿ, ನಂತರ ಅದರ ಮೂಲಕವೇ ಕಿರಣಗಳನ್ನು ವಾಪಸ್ ತರಿಸಿಕೊಂಡರು. ಬೆಳಕಿನ ಕಂಪನ ಸಣ್ಣದಾಗಿರುವುದರಿಂದ ಬೆಳಕಿನ ವೇಗವನ್ನು ಆಳೆಯಲು ಅನುಕೂಲವಾಯಿತು (ಸುಮಾರು ೨.೫ ಸೆಕೆಂಡುಗಳು). ಇದರಿಂದ ಚಂದ್ರ ಮತ್ತು ಭೂಮಿಯ ನಡುವೆಯ ದೂರವನ್ನು ಅತ್ಯಂತ ನಿಖರವಾಗಿ ತಿಳಿಯುವಂತಾಯಿತು. 
 
18477 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು