ನಮ್ಮ ಬಗ್ಗೆ

ಟೀಚರ್ಸ್ ಆಫ್ ಇಂಡಿಯಾಕ್ಕೆ ಸುಸ್ವಾಗತ!

 

ಈ ಅಂತರ್ಜಾಲ ವೇದಿಕೆಯು (ಪೋರ್ಟಲ್) ಶಿಕ್ಷಕರು, ಶಿಕ್ಷಕರ ಬೋಧಕರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇತರರಿಗಾಗಿ ಇರುವ ಒಂದು ಸಂವಾದ ವೇದಿಕೆ.  ಇದು ರಾಷ್ಟ್ರೀಯ ಜ್ಞಾನ ಆಯೋಗ ಮತ್ತು ಅಜೀಂಪ್ರೇಂಜಿ ಪ್ರತಿಷ್ಠಾನದ ಒಂದು ಸಂಯುಕ್ತ ಪ್ರಯತ್ನವಾಗಿದೆ.

ವಿದ್ಯಾ ವಿಷಯಗಳು ಮತ್ತು ಬೋಧನ ಶಾಸ್ತ್ರದ ಬಗ್ಗೆ ಶಿಕ್ಷಕರಿಗಿರುವ ಜ್ಞಾನವನ್ನು ಇನ್ನಷ್ಟು ಹೆಚ್ಚಿಸುವ ವಿವಿಧ ಬೋಧನಾ / ಕಲಿಕೆ ಸಂಪನ್ಮೂಲಗಳ ಮೂಲಕ ಶಿಕ್ಷಕರ ಸಾಮರ್ಥ್ಯವರ್ಧನೆಗೆ ಈ ವೇದಿಕೆಯು ಪ್ರಯತ್ನಿಸುತ್ತದೆ.  ಇದು ತರಗತಿ ಕೋಣೆಗಳಲ್ಲಿ ಬಳಸಬಹುದಾದ ಬೋಧನಾ / ಕಲಿಕೆ ಸಾಮಾಗ್ರಿಗಳ ರೂಪದಲ್ಲಿ ಹೊಸ ಹೊಸ ವಿಧಾನಗಳನ್ನು ಪ್ರತ್ಯಕ್ಷ ತೋರಿಸಿ ಕೊಡುವುದೇ ಅಲ್ಲದೆ ಒಂದು ಸುಸ್ಥಿರ ಬೆಂಬಲವನ್ನು ಅವರಿಗೆ ಒದಗಿಸಿ ಕೊಡುತ್ತದೆ.  ಉಪಾಧ್ಯಾಯರೆಲ್ಲಾ ಒಂದೇ ವೇದಿಕೆಯಲ್ಲಿ ತಮ್ಮ ಜ್ಞಾನವನ್ನು ಪರಸ್ಪರ ಹಂಚಿಕೊಂಡು ತಮ್ಮದೇ ಆದ ಒಂದು ಚೈತನ್ಯಶೀಲ ಜಾಲವನ್ನು ರೂಪಿಸಿಕೊಳ್ಳಲೂ ಇದು ಅವಕಾಶ ಕಲ್ಪಿಸುತ್ತದೆ.

ಈ ಸಂಪನ್ಮೂಲಗಳನ್ನು ವೇದಿಕೆಯ ಬಳಕೆದಾರರು, ಸಹಭಾಗಿ ಸಂಸ್ಥೆಗಳು, ಶಿಕ್ಷಣಾಸಕ್ತರು, ಮತ್ತು ಅಜೀಂ ಪ್ರೇಂಜಿ ಪ್ರತಿಷ್ಠಾನದ ಹಾಗೂ ಅಜೀಂಪ್ರೇಂಜಿ ವಿಶ್ವವಿದ್ಯಾಲಯದ ಸದಸ್ಯರು ಸಿದ್ಧಪಡಿಸುತ್ತಾರೆ.  ವಿಚಾರ ವಿನಿಮಯಕ್ಕಾಗಿಯೇ ಕಲ್ಪಿತವಾಗಿರುವಂತಹ ಈ ಸಧೃಢ ಮತ್ತು ಚೈತನ್ಯ ಶೀಲ ವೇದಿಕೆಯಲ್ಲಿ ತಾವು ಸಕ್ರಿಯವಾಗಿ ಭಾಗವಹಿಸಿ ಸಂಪನ್ಮೂಲ ಸಿದ್ಧಪಡಿಸಬೇಕೆಂಬುದು ನಮ್ಮ ಆತ್ಮೀಯ ಕೋರಿಕೆ.

ಪ್ರಾದೇಶಿಕ ಭಾಷೆಗಳಲ್ಲಿ ಪಾಠ ಮಾಡುವಂತಹ ರಾಜ್ಯ ಸರ್ಕಾರಗಳು ನಡೆಸುತ್ತಿರುವ ಶಾಲೆಗಳ ಶಿಕ್ಷಕರಿಗೆ ಬೆಂಬಲ ಸಾಮಾಗ್ರಿ ಒದಗಿಸುವುದು ನಮ್ಮ ಪ್ರಾಥಮಿಕ ಉದ್ದೇಶ.  ಆದ್ದರಿಂದ ಆ ಭಾಷೆಗಳಲ್ಲಿ ಬೋಧನಾ ಸಂಪನ್ಮೂಲಗಳನ್ನು ಸಿದ್ಧಪಡಿಸುವುದು ಮತ್ತು  ಅವುಗಳನ್ನು ಪರಸ್ಪರ ಹಂಚಿಕೊಳ್ಳುವುದಕ್ಕೆ ಅನುಕೂಲ ಕಲ್ಪಿಸುವುದು ಅತ್ಯಂತ ಅವಶ್ಯವಾಗಿ ಆಗ ಬೇಕಾದ ಕಾರ್ಯ ಎಂದು ನಾವು ಭಾವಿಸುತ್ತೇವೆ.  ಪ್ರಸ್ತುತ ನಾವು ಐದು ಭಾರತೀಯ ಭಾಷೆಗಳು ಮತ್ತು ಆಂಗ್ಲಭಾಷೆಯಲ್ಲಿ ಈ ಸಾಮಾಗ್ರಿಯನ್ನು ಹೊಂದಿದ್ದೇವೆ.  ತಮ್ಮ ನಿರಂತರ ಸಹಕಾರ ಮತ್ತು ಸಹಯೋಗದೊಂದಿಗೆ ಇದನ್ನು ಇತರ ಎಲ್ಲಾ ಭಾರತೀಯ ಭಾಷೆಗಳಿಗೆ ವಿಸ್ತರಿಸುವ ವಿಶ್ವಾಸವನ್ನು ನಾವು ಹೊಂದಿದ್ದೇವೆ.  ನಮ್ಮ ಸಂಪನ್ಮೂಲಗಳು ಎಲ್ಲ ಲಾಭ ನಿರೀಕ್ಷೆ ಇಲ್ಲದ ಸಂಸ್ಥೆಗಳಿಗೆ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಸದಾ ಮುಕ್ತವಾಗಿ ದೊರೆಯುತ್ತವೆ.

ವಿವಿಧ ಭಾಷೆಗಳ ಶಿಕ್ಷಕರು ಪರಸ್ಪರ ಕೊಳ್ಕೊಡೆ ನಡೆಸಲು ತಮ್ಮ ಒಳನೋಟಗಳನ್ನು ಮತ್ತು ದೇಶಾದ್ಯಂತ ನಡೆಯುತ್ತಿರುವ ಉತ್ತಮ ಶೈಕ್ಷಣಿಕ ಕಾರ್ಯಾಚರಣೆಗಳನ್ನು ಪರಸ್ಪರ ಹಂಚಿಕೊಳ್ಳಲು, ಶಿಕ್ಷಣವನ್ನು ಕುರಿತ ಸಂಪನ್ಮೂಲಗಳು, ಮಾಹಿತಿಗಳು ಮತ್ತು ಪ್ರಯೋಗಗಳನ್ನು ಹಂಚಿಕೊಳ್ಳಲು ಇದು ವೇದಿಕೆಯಾಗಿದೆ.  ಪಠ್ಯ ರೂಪದಲ್ಲಿ ಮತ್ತು ಮಲ್ಟಿಮೀಡಿಯಾ ರೂಪಗಳಲ್ಲಿ (ಲೇಖನಗಳು, ಕಾರ್ಯನೀತಿ ದಾಖಲೆಗಳು, ಕೈಪಿಡಿಗಳು, ಸಾಧನಗಳು, ಪಾಠಯೋಜನೆಗಳು, ಕಾರ್ಯಪತ್ರಗಳು, ಚಟುವಟಿಕೆಗಳು ಇತ್ಯಾದಿ.) ಸಹ ಈ ವೇದಿಕೆಯಲ್ಲಿ ದೊರೆಯುವಂತೆ ಮಾಡಲಾಗುವುದು.  ಈ ಗುರಿಯ ಸಾಧನೆಗಾಗಿ ನಮಗೆ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರತರಾಗಿ ಭಾರತದುದ್ದಗಲಕ್ಕೂ ಇರುವ ಅನೇಕ ಸಂಸ್ಥೆಗಳ ಜಾಲವು ಉತ್ತಮ ಬೆಂಬಲನೀಡುತ್ತಿವೆ.

ಈ  ನಮ್ಮ ಸಹಭಾಗಿಗಳು ಮತ್ತು ಜೊತೆಗಾರ ವ್ಯಕ್ತಿಗಳು  ಈ ನಮ್ಮ ಪ್ರಯತ್ನದ ಬೆನ್ನೆಲುಬಾಗಿದ್ದಾರೆ.  ನೀವು ನಿಮ್ಮ ಸಂಪನ್ಮೂಲ ಒದಗಿಸಿ ಸಹಕರಿಸಲು ಸದಾ ಸ್ವಾಗತವಿದೆ.

19824 ನೊಂದಾಯಿತ ಬಳಕೆದಾರರು
7791 ಸಂಪನ್ಮೂಲಗಳು